ಇತ್ತೀಚಿನ ಸುದ್ದಿ
ಗುರುವಾಯನಕೆರೆ: ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದಾಗ ಕರೆಂಟ್ ಪ್ರವಹಿಸಿ ಪವರ್ ಮ್ಯಾನ್ ಸಾವು
30/05/2025, 22:18

ಬೆಳ್ತಂಗಡಿ(reporterkarnataka.com): ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ಸಹಾಯಕ ಪವರ್ ಮ್ಯಾನ್ ವಿದ್ಯುತ್ ಆಘಾತದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟವರನ್ನು ಓಡಿಲ್ನಾಳ ನಿವಾಸಿ ವಿಜೇಶ್ ಎಂದು ಗುರುತಿಸಲಾಗಿದೆ.
ಗುರುವಾಯನಕೆರೆ ಸಮೀಪದ ಪಣೆಜಾಲು ಎಂಬಲ್ಲಿ ವಿದ್ಯುತ್ ಪರಿವರ್ತಕದಲ್ಲಿ ಉಂಟಾಗಿದ್ದ ತೊಂದರೆಯನ್ನು ಸರಿಪಡಿಸಲು ಅವರು ಕಂಬವೇರಿದ್ದರು. ಕೆಲಸ ನಿರ್ವಹಿಸಲು ಜಿಒಎಸ್‌ನಲ್ಲಿ ವಿದ್ಯುತ್ ಕಡಿತಗೊಳಿಸಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಒಎಸ್‌ನಲ್ಲಿ ಸರಿಯಾಗಿ ವಿದ್ಯುತ್ ಕಡಿತಗೊಳ್ಳದ ಕಾರಣ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ.