7:43 PM Sunday12 - July 2026
ಬ್ರೇಕಿಂಗ್ ನ್ಯೂಸ್
ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;… Kodagu | ಮಡಿಕೇರಿ ರಾಜಾಸೀಟ್ ನಾಳೆಯಿಂದ ಜುಲೈ 12ರವರೆಗೆ ಕ್ಲೋಸ್: ಜಿಲ್ಲಾಧಿಕಾರಿ ಆದೇಶ ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ

ಇತ್ತೀಚಿನ ಸುದ್ದಿ

Chikkamagaluru | ಚಾರ್ಮಾಡಿ ಘಾಟಿಯಲ್ಲಿ ಜಾರುವ ಬಂಡೆಗಳ ಮಧ್ಯೆ ಪ್ರವಾಸಿಗರ ಅಪಾಯಕಾರಿ ಮೋಜು

27/05/2025, 13:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದ ಜಲಪಾತಗಳ ಬಳಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ನಿರಂತರವಾಗಿ ನೀರು ಹರಿಯುತ್ತಿರುವ ಕಾರಣ ಬಂಡೆಗಳು ತೀವ್ರವಾಗಿ ಜಾರುತ್ತಿದ್ದು, ಅಪಾಯದ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಜೀವದ ಹಂಗು ಮರೆತು ಜಾರುವ ಬಂಡೆಗಳ ಮೇಲೆ ಹತ್ತಿ ಸೆಲ್ಫಿ, ವಿಡಿಯೋ ತೆಗೆದುಕೊಳ್ಳುತ್ತಿದ್ದಾರೆ.


ಈ ಹಿಂದೆ ಇದೇ ಪ್ರದೇಶದಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡವರು, ಜೀವ ಕಳೆದುಕೊಂಡವರೂ ಇದ್ದಾರೆ. ಹೆಚ್ಚಿನ ಮಳೆಯ ಪರಿಣಾಮವಾಗಿ ಜಲಪಾತಗಳು ಉಬ್ಬಿ ಹರಿಯುತ್ತಿದ್ದು, ಜಾರುವಿಕೆ ಹೆಚ್ಚು ಸಾಧ್ಯವಾಗುತ್ತಿದೆ.
ಪೊಲೀಸರು ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದು, ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಕೆಲವರು ಪೊಲೀಸರ ಕಣ್ತಪ್ಪಿಸಿ ಅಪಾಯಕರ ಸ್ಥಳಗಳಿಗೆ ಪ್ರವೇಶಿಸುತ್ತಿದ್ದಾರೆ. ಪೊಲೀಸರು ಒಂದು ಕಡೆ ಎಚ್ಚರಿಕೆಯಿಂದ ನೋಡುತ್ತಿದ್ದರೆ, ಪ್ರವಾಸಿಗರು ಮತ್ತೊಂದು ಕಡೆ ಬಂಡೆಗಳ ಮೇಲೆ ಹತ್ತುತ್ತಿದ್ದಾರೆ.
ಸಾರ್ವಜನಿಕರು ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಇಂತಹ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯುಳ್ಳ ವರ್ತನೆ ತಾಳಬೇಕು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು