1:24 PM Sunday18 - May 2025
ಬ್ರೇಕಿಂಗ್ ನ್ಯೂಸ್
MSEM | ಮುಂದಿನ ದಿನಗಳಲ್ಲಿ ಎಂಎಸ್ಎಂಇ ಪ್ರತ್ಯೇಕ ಇಲಾಖೆ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ Tamilnadu | ಮಂಜೇಶ್ವರದ ಸ್ನೇಹಾಲಯದಿಂದ ಕುಂಬಕೋಣಂವರೆಗೆ ಗಿರಿ ಪಯಣ: ಕುಟುಂಬ ಜತೆ ಮತ್ತೆ… ಮಲೆನಾಡಿನಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ: ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ತುಮಕೂರು-ಶಿರಾ-ಚಿತ್ರದುರ್ಗ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗ: ರೈಲ್ವೆ ಸಚಿವ ವಿ. ಸೋಮಣ್ಣಗೆ… Bangalore | ಗ್ಯಾರಂಟಿ ಯೋಜನೆಗಳ ಯಶಸ್ಸಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಶ್ರಮವಿದೆ: ಮುಖ್ಯಮಂತ್ರಿ… ಆಪರೇಷನ್ ಸಿಂಧೂರ್; ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಅಂತರಾತ್ಮದ ದನಿ: ಕೇಂದ್ರ… Davanagere | ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದುರ್ಬಲ ಗ್ರಾಪಂಗಳ ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ… ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ…

ಇತ್ತೀಚಿನ ಸುದ್ದಿ

Tamilnadu | ಮಂಜೇಶ್ವರದ ಸ್ನೇಹಾಲಯದಿಂದ ಕುಂಬಕೋಣಂವರೆಗೆ ಗಿರಿ ಪಯಣ: ಕುಟುಂಬ ಜತೆ ಮತ್ತೆ ಪುನರ್ಮಿಲನ!

18/05/2025, 13:02

ಕುಂಬಕೋಣಂ(reporterkarnataka.com): ತಂಜಾವೂರು ಜಿಲ್ಲೆಯ ಕುಂಬಕೋಣಂನ ಮೇಲಕವೇರಿ ಗ್ರಾಮದ ಪೆರುಮಂಡಿ ಉತ್ತರ ಬೀದಿಯ ನಿವಾಸಿ ಗಿರಿ ಅವರು ಆರು ತಿಂಗಳು ನಾಪತ್ತೆಯಾಗಿದ್ದ ನಂತರ, ಮೇ 15, 2025 ರಂದು ತಮ್ಮ ಕುಟುಂಬದೊಂದಿಗೆ ಅತೀ ಸಂತೋಷದಿಂದ ಪುನರ್ಮಿಲನಗೊಂಡರು. ಕಾಸರಗೋಡಿನ ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸಹಾಯದಿಂದ ನಡೆದ ಈ ಪುನರ್ಮಿಲನವು ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ಅಪಾರ ಆನಂದ ತಂದಿತು.


ಅವಿವಾಹವಾತ ಗಿರಿ ಅವರು ಕಳೆದ ಎರಡು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಅವರ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿಲ್ಲ. ಇದು ಅವರು ಕಾಣೆಯಾದ ಮೊದಲ ಘಟನೆಯಲ್ಲ; ಈ ಹಿಂದೆಯೂ ಒಮ್ಮೆ ಕಾಣೆಯಾಗಿದ್ದರು. ಮಾರ್ಚ್ 22, 2025 ರಂದು ಗಿರಿ ಅವರನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಗೆ ದಾಖಲಿಸಲಾಯಿತು. ಕರ್ನಾಟಕದ ಹೆಮ್ಮೆಯ ಪುತ್ರ, ಈಶ್ವರ್ ಮಲ್ಪೆ ಅವರು ಗಿರಿ ಅವರನ್ನು ಸ್ನೇಹಾಲಯಕ್ಕೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಮಗ್ರ ಚಿಕಿತ್ಸೆಯ ನಂತರ, ಏಪ್ರಿಲ್ 11, 2025 ರಂದು ಗಿರಿ ಅವರನ್ನು ಶ್ರದ್ಧಾ ಫೌಂಡೇಶನ್ ಗೆ ವರ್ಗಾಯಿಸಲಾಯಿತು. ಅಲ್ಲಿಂದ ಶ್ರದ್ದಾ ಸಂಸ್ಥೆಯವರು ಗಿರಿ ಅವರನ್ನು ಅವರ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದರು. ಚಿತ್ರಕಾರರಾಗಿರುವ ಅವರ ತಂದೆ ಮತ್ತು ಬಡ ಕುಟುಂಬವು ಗಿರಿ ಅವರ ಮರಳುವಿಕೆಯಿಂದ ಆನಂದಭರಿತವಾಯಿತು. ಮೇಲಕವೇರಿ ಗ್ರಾಮದ ಗ್ರಾಮಸ್ಥರು ಮತ್ತು ನೆರೆಹೊರೆಯವರು ಈ ಸಂಭ್ರಮದಲ್ಲಿ ಭಾಗಿಯಾಗಿ, ಗಿರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ಚೇತರಿಕೆಗೆ ಸಹಾಯವಾಗಲೆಂದು ಗಿರಿ ಅವರಿಗೆ ಎರಡು ತಿಂಗಳ ಔಷಧಿಗಳನ್ನು ಒದಗಿಸಲಾಯಿತು. ಗ್ರಾಮದ ಜನರ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿತ್ತು, ಇದು ಗ್ರಾಮದ ಒಗ್ಗಟ್ಟು ಮತ್ತು ಕರುಣೆಯನ್ನು ತೋರಿಸಿತು.
ಈ ಪುನರ್ಮಿಲನವು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಶ್ರಮವನ್ನು ಎತ್ತಿ ತೋರಿಸುತ್ತದೆ, ಇದು ದೇಶಾದ್ಯಂತ 1,600 ಕ್ಕೂ ಹೆಚ್ಚು ಜನರನ್ನು ಪುನರ್ಮಿಲನಗೊಳಿಸಿದೆ. ಜೊತೆಗೆ ಈಶ್ವರ್ ಮಲ್ಪೆಯಂತಹ ಕಾಳಜಿಯುಳ್ಳ ನಾಗರಿಕರ ಪ್ರಮುಖ ಪಾತ್ರವನ್ನು ಮತ್ತು ಕುಟುಂಬಗಳನ್ನು ಒಂದುಗೂಡಿಸುವಲ್ಲಿ ಸಮುದಾಯದ ಬೆಂಬಲದ ಶಕ್ತಿಯನ್ನು ತೋರಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು