ಇತ್ತೀಚಿನ ಸುದ್ದಿ
Vatican City | ನೂತನ ಪೋಪ್ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಆಯ್ಕೆ: ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಕರೆ
09/05/2025, 22:47

ವೆಟಿಕಾನ್ ಸಿಟಿ(reporterkarnataka.com): ರೋಮನ್ ಕ್ಯಾಥೋಲಿಕ್ ಚರ್ಚ್‌ನ ನೂತನ ಪೋಪ್ ಆಗಿ ಅಮೆರಿಕದ ಅತೀ ವಂದನೀಯ
ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಅವರು ಆಯ್ಕೆಗೊಂಡಿದ್ದಾರೆ.
ಕ್ಯಾಥೋಲಿಕ್ ಚರ್ಚ್‌ನ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಅಮೆರಿಕದವರು ಈ ಉನ್ನತ ಸ್ಥಾನಕ್ಕೇರಿದ್ದಾರೆ.
ಗುರುವಾರ ಅಂತಿಮ ಆಯ್ಕೆ ನಡೆಯಿತು. 69 ವರ್ಷದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ಅವರು ಪೋಪ್ ಆಗಿ ಆಯ್ಕೆಯಾದರು. ಅವರು ‘ಲಿಯೊ 14’ ಎಂಬ ಹೆಸರಿನಿಂದ ಕರೆಸಿಕೊಳ್ಳಲಿದ್ದಾರೆ.
ರಾಬರ್ಟ್ ಫ್ರಾನ್ಸಿಸ್ ಅವರು 1955ರ ಸೆಪ್ಟೆಂಬರ್ 14ರಂದು ಷಿಕಾಗೊದಲ್ಲಿ ಜನಿಸಿದರು.
2023ರಲ್ಲಿ ಅವರು ವ್ಯಾಟಿಕನ್‌ನ ಕಾರ್ಡಿನಲ್ ಆಗಿ ನೇಮಕವಾದರು. ಪೋಪ್ ಆಗಿ ಆಯ್ಕೆಯಾದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು ಎಂದು ಕರೆಕೊಟ್ಟರು. ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಕೋರಿದರು.