3:54 PM Friday9 - May 2025
ಬ್ರೇಕಿಂಗ್ ನ್ಯೂಸ್
J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ… Chikkamagaluru | ಮಲೆನಾಡಿನಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ: ಮೂಡಿಗೆರೆ ಸಮೀಪ ಹಸುವನ್ನು ಕೊಂದ… ಮಾಜಿ ಮುಖ್ಯಮಂತ್ರಿ, ದಿವಂಗತ ಕೆ.ಸಿ.ರೆಡ್ಡಿ ಅವರ ಜನ್ಮದಿನ: ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ

ಇತ್ತೀಚಿನ ಸುದ್ದಿ

Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್ ಬಿಲ್ , ದಂಡ ಎರಡೂ ಮನ್ನಾ: ಮುಖ್ಯಮಂತ್ರಿ

08/05/2025, 23:07

ಮಂಡ್ಯ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು: ಸಿಎಂ

ನೂತನ ಹಾಸ್ಟೆಲ್ ಕೇವಲ‌ ಕುರುಬರ ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಜಾತಿಯ ಬಡವರಿಗೂ ಅವಕಾಶ ಇರುತ್ತದೆ: ಸಿಎಂ

ಮಂಡ್ಯ(reporterkarnataka.com): ಮಂಡ್ಯ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು. ನಾಡಿಗೆ ಕೃಷಿ ಮೂಲಕ ಅನ್ನ ಕೊಡುವ ಅನ್ನದಾತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಹಾಸ್ಟೆಲ್ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನೂತನ ಹಾಸ್ಟೆಲ್ ಕೇವಲ‌ ಕುರುಬರ ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಜಾತಿಯ ಬಡವರಿಗೂ ಅವಕಾಶ ಇರುತ್ತದೆ ಎಂದರು.
ದಾನಿಗಳು ಕೊಟ್ಟಷ್ಟು ಕೊಡಲಿ. ನಾನೂ ಸಹಾಯ ಮಾಡುತ್ತೇನೆ. ಮಂಡ್ಯದ ಜನ ಹತ್ತಾರು ವರ್ಷಗಳಿಂದ ನನಗೆ ಬಂಬಲ ಕೊಡುತ್ತಲೇ ಬರುತ್ತಿದ್ದಾರೆ ಎಂದರು.
ನಾಲ್ವಡಿ ಅರಸರನ್ನು ನಾವು ಸದಾ ಸ್ಮರಿಸಬೇಕು. ಮಂಡ್ಯದ ಪ್ರಗತಿಯಲ್ಲಿ ಇವರ ಕೊಡುಗೆ ಅಪಾರ ಎಂದು ಅವರು ನುಡಿದರು.
ನಮ್ಮ ಸರ್ಕಾರ ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್ ಬಿಲ್ , ದಂಡ ಎರಡನ್ನೂ ಮನ್ನಾ ಮಾಡಿದ್ದೇವೆ ಎಂದರು.
ನಾನು ಮಂಡ್ಯದ ಈ ಹಾಸ್ಟೆಲ್ ಕಟ್ಟಡ ಶಿಥಿಲ ಆಗಿದ್ದನ್ನು ನೋಡಿದ್ದೆ. ಅನುದಾನ ಕೊಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದೆ. ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶ ಈಡೇರಬೇಕಾದರೆ ಹಾಸ್ಟೆಲ್ ಗಳ ಅಗತ್ಯವಿದೆ. ಹಳ್ಳಿಗಾಡಿನ ಮಕ್ಕಳೂ ವೈದ್ಯರು, ಎಂಜಿನಿಯರ್ ಗಳಾಗಬೇಕು. ಕೇವಲ ಒಂದು ವರ್ಗದವರು ಮಾತ್ರ ಆಗಬಾರದು, ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.
ಇವತ್ತೇನಾದರೂ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಉಳಿದಿದ್ದರೆ, ವೈದ್ಯ ಕಾಲೇಜು, ಕೃಷಿ ವಿವಿ ಬಂದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವ ಚಲುವರಾಯಸ್ವಾಮಿ ಅವರ ಕಾಳಜಿ, ಶ್ರಮ ಕಾರಣ ಎಂದು ಸ್ಪಷ್ಟಪಡಿಸಿದರು.


ಕಳೆದ ವರ್ಷ ಮಳೆ-ಬೆಳೆ ಚನ್ನಾಗಿ ಆಗಿದೆ. ಸಿದ್ದರಾಮಯ್ಯ ಅವರ ಕಾಲಗುಣ ಸರಿ ಇಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿ-ಜೆಡಿಎಸ್ ನವರಿಗೆ ಮಳೆಯೇ ಉತ್ತರ ಕೊಟ್ಟಿದೆ. ಈ ವರ್ಷವೂ ಉತ್ತಮ ಮಳೆ ಬೆಳೆ ಆಗುವ ಭರವಸೆ ಇದೆ ಎಂದರು.
ಬಿಜೆಪಿ ನಿರಂತರವಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದೆ. ಸರ್ಕಾರದ ಬೊಕ್ಕಸ ಖಾಲಿ ಎನ್ನುತ್ತಿದ್ದಾರೆ. ಒಂದು ಲಕ್ಷದ 35 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿಗೆ ತೆಗೆದಿರಿಸಿದ್ದೇವೆ. ಇದು ಜನರಿಗೆ ಕಾಣುತ್ತದೆ, ಬಿಜೆಪಿಯವರಿಗೆ ಕಾಣುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.
ಯಾರ್ಯಾರು ಅಕ್ಷರ ಸಂಸ್ಕೃತಿ ಮತ್ತು ಸಾಮಾಜಿಕ ಅವಕಾಶಗಳಿಂದ ವಂಚಿತರಾಗಿದ್ದಾರೋ ಅವರೆಲ್ಲರ ಪರವಾಗಿ ನಮ್ಮ ಸರ್ಕಾರ ಇರುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು