8:02 PM Monday5 - May 2025
ಬ್ರೇಕಿಂಗ್ ನ್ಯೂಸ್
ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ Chikkamagaluru | ಕಾಶ್ಮೀರದಲ್ಲಿ ಉಗ್ರರ ದಾಳಿ: ಕೊಟ್ಟಿಗೆಹಾರ ಬಂದ್; ಅಂಗಡಿ-ಮುಂಗಟ್ಟು ಸ್ತಬ್ದ Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ… ಶಾಂತಿಗಾಗಿ ಪ್ರಯತ್ನಿಸಿದ್ದೇನೆ ಹೊರತು ಯಾರ ಪರವೂ ಇಲ್ಲ, ಯಾರ ವಿರುದ್ದವೂ ಇಲ್ಲ: ಸ್ಪೀಕರ್… ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ… Vijayapura | ಸಚಿವ ಜಮೀರ್‌ ಸುಮ್ಮನಿದ್ದರೆ ಸಾಕು, ಅದೇ ದೊಡ್ಡ ದೇಶ ಸೇವೆ:… ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ… Chikkamagaluru | ಪೆಹಲ್ಗಾಮ್ ದಾಳಿ: ಆಲ್ದೂರು ಪಟ್ಟಣ ಬಂದ್; ವ್ಯಾಪಾರ-ವಹಿವಾಟು ಸ್ತಬ್ದ; ವಾರದ… Kerala | ಪ್ರಧಾನಿ ಮೋದಿ – ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ… Karnataka High Court | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗೆ ಅಶ್ಲೀಲ ಪದ…

ಇತ್ತೀಚಿನ ಸುದ್ದಿ

ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ

05/05/2025, 20:02

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ದೇಶದ ಅತಿ ದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.
ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಪಡೆದಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ ದೇಶದಾದ್ಯಂತ ಭಾರೀ ಬೇಡಿಕೆ ಉಂಟಾಗಿದೆ. ತೋತಾಪುರಿ, ನೀಲಂ, ರಾಜಗಿರ, ಮಲಿಕಾ‌, ಬಾದಾಮಿ , ಬೇನಿಶ , ಮಲ್ಗೋಬಾ , ಖುದ್ದೂಸ್ , ಶಕರ್ ಬೀಜ್ , ದೇಸರಿ , ಇಮಾಮ್ ಪಸಂದ್ , ಪಾಶಾ ಪಸಂದ್ , ಶೇರಿ , ದಿಲ್ ಪಸಂದ್ , ಖುದಾದತ್ , ಕೆಸರ್ , ಚಿತ್ತೋರ, ನಾಟಿ , ಮುಂತಾದ ಪ್ರಸಿದ್ಧ ಮಾವು ತಳಿಗಳು ಇಲ್ಲಿ ಸಸ್ಯವಾಗುತ್ತವೆ. ಇವುಗಳಲ್ಲಿ ಕೆಲವು ತಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿಯಾಗಿವೆ.
ಇಲ್ಲಿನ ಮಾವುಗಳು ಜಮ್ಮು-ಕಾಶ್ಮೀರ್, ಪಂಜಾಬ್, ಹರಿಯಾಣಾ, ರಾಜಸ್ಥಾನ್, ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ವೆಸ್ಟ್ ಬಂಗಾಳ , ಗೋವಾ, ಕೇರಳ, ಛತ್ತೀಸ್ಗಢ, ಬಿಹಾರ , ತಮಿಳ್ ನಾಡು , ಆಂಧ್ರ ಪ್ರದೇಶ್, ಕೇರಳ ಹಾಗೂ ಇತರ ರಾಜ್ಯಗಳಿಗೆ ನಿತ್ಯ ರವಾನೆಯಾಗುತ್ತವೆ. ಬಾದಾಮಿ, ಮಲಿಕಾ‌, ಬೇನಿಶ ತಳಿಗಳ ಮಾವುಗಳು ದುಬೈ, ಸೌದಿ ಅರೇಬಿಯಾ, ಸಿಂಗಾಪುರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿವೆ. ಅಲ್ಲದೆ ಇಲ್ಲಿನ ಮಾವಿನಿಂದ ತಯಾರಾಗುವ ಜ್ಯೂಸ್ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.
ಈ ಬಾರಿ ಮೇ 15 ರಿಂದ ಮಾರುಕಟ್ಟೆ ಆರಂಭವಾಗಲಿದ್ದು, ರೈತರು ಹಾಗೂ ವ್ಯಾಪಾರಸ್ಥರಲ್ಲಿ ನೂತನ ಆಶೆಗಳು ಮೂಡಿವೆ. ಮಾರುಕಟ್ಟೆಗಳ ತಯಾರಿ ಕೆಲಸಗಳು ಪೂರ್ಣಗೊಂಡಿದ್ದು, ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿಸಲಾಗುತ್ತಿದೆ. ಪ್ರತ್ಯಕ್ಷ ಖರೀದಿದಾರರು, ಜೈವಿಕ ಉತ್ಪನ್ನ ಹಮ್ಮಿಕೊಳ್ಳುವ ವ್ಯಾಪಾರಸ್ಥರು, ತಾಜಾ ಮಾರುಕಟ್ಟೆ ವ್ಯವಸ್ಥಾಪಕರು ಎಲ್ಲರೂ ತಾವು ತಾವು ಸಜ್ಜಾಗುತ್ತಿದ್ದಾರೆ.
ಈ ಬಾರಿ ಮಾವಿಗೆ ಹವಾಮಾನ ಬೆಂಬಲವಾಗಿಲ್ಲವೋ ಎಂಬ ಅನುಮಾನವಿದ್ದರೂ, ಮಾರುಕಟ್ಟೆ ಆರಂಭವಾದ ಮೇಲೆ ಉತ್ಪಾದನೆಯ ಪೂರ್ಣ ಸ್ಥಿತಿ ಗೊತ್ತಾಗಲಿದೆ. ಕೆಲವೊಂದು ಪ್ರದೇಶಗಳಲ್ಲಿ ಫಲವತ್ತತೆ ಕಡಿಮೆಯಾಗಿದ್ದು, ಇದರಿಂದ ಬೆಲೆಗೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಮಾವು ಬೆಳಗಾರ ಬಿ.ಎ. ಸೈಯದ್ ಫಾರೂಕ್ ಬುರಕಾಯಲಕೋಟೆ ಹೇಳಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಮಂಡಿಗಳ ಮಾಲೀಕರು ಹಾಗೂ ಖಾಸಗಿ ಮಂಡಿಗಳವರು ಮೇ 15ರಿಂದ ಮಾರುಕಟ್ಟೆ ಆರಂಭವಾಗುತ್ತದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬುದು ಮಾರುಕಟ್ಟೆ ಚಟುವಟಿಕೆ ಪ್ರಾರಂಭವಾದ ನಂತರವೇ ಸ್ಪಷ್ಟವಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು