ಇತ್ತೀಚಿನ ಸುದ್ದಿ
Murder | ನಾರಾಯಣಪುರ: ಗೌಡಪ್ಪ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಅಪ್ರಾಪ್ತ ವಯಸ್ಸಿನ ಅಕ್ಕನ ಮಗನಿಂದಲೇ ಹತ್ಯೆ?
04/05/2025, 14:02

ಶಿವು ರಾಠೋಡ ಹುಣಸಗಿ ಯಾದಗಿರಿ
info.reporterkarnataka@gmail.com
ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಂಡಬಾವಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಗೌಡಪ್ಪ ಚವಾನವಾವಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಕೊಲೆಗೀಡಾದ ವ್ಯಕ್ತಿಯ ಅಪ್ರಾಪ್ತ ವಯಸ್ಸಿನ ಅಕ್ಕನ ಮಗನೇ ಈ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದೆ.
ಕೊಲೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಈ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಯಾದಗಿರಿ ಎಸ್‌ಪಿ ಅವರ ಆದೇಶದಂತೆ ಸಿಪಿಐ ರವಿಕುಮಾರ್ ತನಿಖೆ ಕೈಗೊಂಡಿದ್ದರು.
ಮೃತ ವ್ಯಕ್ತಿಯ ಪತ್ನಿ ರೇಣುಕಮ್ಮ ಅವರು ಈ ಮುನ್ನ
ನೀಡಿದ ದೂರಿನ ಮೇರೆಗೆ ಏಪ್ರಿಲ್ 22ರಂದು ಹಳೆಯ ವೈರತ್ವದ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ತನಿಖೆ ಮುಂದುವರೆಸಿದಾಗ ನೈಜ ವಿಚಾರ ಬೆಳಕಿಗೆ ಬಂದಿದೆ.
ಮೃತರ ಅಕ್ಕನ ಮಗ 14 ವರ್ಷದ ಬಾಲಕ ಈ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಅಳಿಯ ಮತ್ತು ಮಾವನ ಮಧ್ಯೆ ಯಾವುದೋ ವಿಷಯಕ್ಕೆ ಜಗಳವಾಗಿ ಮಾವನ ತಲೆಗೆ ಅಳಿಯ
ಹಿಂಬದಿಯಿಂದ ಬಡಿಗೆಯಲ್ಲಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾಗಿ ಗೌಡಪ್ಪ ಅವರು ಮೃತಪಟ್ಟಿದ್ದರು.
ಅದರೆ ಈ ವಿಚಾರವನ್ನು ಬಾಲಕನ ಮನೆ ಮಂದಿ ಮುಚ್ಚಿಟ್ಟು ಕಟ್ಟು ಕತೆ ಸೃಷ್ಟಿಸಿದ್ದರು. ಈ ಘಟನೆ
ಏಪ್ರಿಲ್ 19ರಂದು ರಾತ್ರಿ 9 ಗಂಟೆ ನಡೆದಿದೆ. ನಂತರ
ಬಾಗಲಕೋಟ ಆಸ್ಪತ್ರೆಯಿಂದ ಶವ ತಂದು ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆದಿದ್ದಾರೆ. ಪೊಲೀಸರೇ ಆರೋಪಿಗಳ ಎಂಬುವಂತೆ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.