ಇತ್ತೀಚಿನ ಸುದ್ದಿ
Kerala | ಪ್ರಧಾನಿ ಮೋದಿ – ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ ವೇದಿಕೆಯಲ್ಲಿ!: ಅಕ್ಕಪಕ್ಕ ಕೂತ ಉಭಯ ನಾಯಕರು!!
02/05/2025, 21:35

ತಿರುವನಂತಪುರಂ(reporterkarnataka.com): ಸೈದ್ದಾಂತಿಕವಾಗಿ ಉತ್ತರ ಮತ್ತು ದಕ್ಷಿಣ ಧ್ರುವದಂತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಒಂದೇ ವೇದಿಕೆಯಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡರು. ಅಕ್ಕಪಕ್ಕ ಕೂತಿರುವ ಉಭಯ ನಾಯಕರು ಕೈಹಿಡಿದು ಕೊಂಡು ಏನೋ ಮಾತನಾಡಿದರು.
ಇದೆಲ್ಲ ನಡೆದಿರುವುದು ಕೇರಳದ ತಿರುವನಂತಪುರದಲ್ಲಿ ಅದಾನಿ ಸಮೂಹ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಳಿಂಜಂ ಬಂದರು ಉದ್ಘಾಟನೆ ಸಮಾರಂಭದಲ್ಲಿ.
ಬಂದರಿನ ಮೊದಲ ಹಂತದ ಸೌಲಭ್ಯವನ್ನು ಪ್ರಧಾನಿ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದರು.
ವಿಳಿಂಜಂ ಬಂದರಿನ ಎರಡನೇ ಹಂತದ ಯೋಜನೆಗೂ ಮೋದಿ ಚಾಲನೆ ನೀಡಿದರು.
ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಭಾರತದ ಮೊದಲ ಟ್ರಾನ್ಸ್ಶಿಪ್ಮೆಂಟ್ ಪೋರ್ಟ್ (ಹಡಗಿನಿಂದ ಹಡಗಿಗೆ ಸರಕು ಸಾಗಿಸುವ ಬಂದರು) ಆಗಿದೆ. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಡಗು ಸಾಗಣೆಯಲ್ಲಿ ಭಾರತಕ್ಕೆ ಒಂದು ಮಹತ್ವದ ಪಾತ್ರ ಸಿಕ್ಕಂತಾಗುತ್ತದೆ. ಈ ಯೋಜನೆಯು ನವಯುಗದ ಅಭಿವೃದ್ಧಿಯ ಸಂಕೇತ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅದಾನಿ ಸಮೂಹಕ್ಕೆ ಸೇರಿದ ಅದಾನಿ ಪೋರ್ಟ್ಸ್ (ಎಪಿಎಸ್ಇಝಡ್) ಈ ಆಳ ನೀರಿನ ಬಂದರನ್ನು ಅಭಿವೃದ್ಧಿಪಡಿಸಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ನಡೆದ ಈ ಯೋಜನೆಯ ವೆಚ್ಚ ₹8,000 ಕೋಟಿ ಆಗಿದೆ.
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ವೇದಿಕೆಯಲ್ಲಿದ್ದರು.
(ಚಿತ್ರ ಕೃಪೆ: ಮಾತೃಭೂಮಿ)
.