ಇತ್ತೀಚಿನ ಸುದ್ದಿ
Chikkamagaluru | ಮೂಡಿಗೆರೆ: ಭಾರಿ ಗಾಳಿ ಮಳೆಗೆ ಹಾರಿದ ಮನೆಯ ಮೇಲ್ಚಾವಣಿ; ಮಕ್ಕಳು ಅಪಾಯದಿಂದ ಪಾರು
01/05/2025, 20:00

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ತ್ರಿಪುರ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆ ಮೇಲ್ಚಾವಣಿ ಹಾರಿ, ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಬಣಕಲ್ ಹೋಬಳಿಯ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರ ಗ್ರಾಮದ ನಿವಾಸಿ ಕುಸುಮ ಅವರ ಮನೆಗೆ ಇಂದು ಮಧ್ಯಾಹ್ನದ ವೇಳೆ ಬೀಸಿದ ತೀವ್ರ ಗಾಳಿ ಮತ್ತು ಮಳೆಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಸಿಮೆಂಟ್ ಶೀಟ್‌ನ ಮೇಲ್ಚಾವಣಿ ಸಂಪೂರ್ಣವಾಗಿ ನೆಲಸಮವಾಗಿ ಬಿದ್ದಿದ್ದು, ಮನೆಯ ಒಳಗಿದ್ದ ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಸ್ಥಳೀಯರು ಕೂಡಲೇ ಗಾಯಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕುಟುಂಬಕ್ಕೆ ಸರ್ಕಾರದಿಂದ ನೆರವು ಸಿಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.