6:05 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

Mangaluru | ಪ್ರಖ್ಯಾತ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇನ್‌ ಫ್ರಾ ಸ್ಟ್ರಕ್ಚರ್ ಡೆವಲರ‍್ಸ್ ನಿಂದ 2 ನೂತನ ಐಷಾರಾಮಿ ವಸತಿ ಸಮುಚ್ಚಯಗಳಿಗೆ ಶಿಲಾನ್ಯಾಸ

30/04/2025, 18:39

ಮಂಗಳೂರು(reporterkarnataka.com): ಮಂಗಳೂರು ನಗರದ ಜನಪ್ರಿಯ ಹಾಗೂ ವಿಶ್ವಾಸಾರ್ಹ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇನ್‌ ಫ್ರಾ ಸ್ಟ್ರಕ್ಚರ್ ಡೆವಲರ‍್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎರಡು ಐಶಾರಾಮಿ ವಸತಿ ಸಮುಚ್ಚಯಗಳಾದ ಸ್ಕೈ ಗಾರ್ಡನ್ ಮತ್ತು ಪೂರ್ವಜ್ ಇದರ ಶಿಲಾನ್ಯಾಸ ಸಮಾರಂಭವು ಇಂದು ನಡೆಯಿತು.
*ಸ್ಕೈ ಗಾರ್ಡನ್:* ಮಂಗಳೂರಿನ ಲೇಡಿಹಿಲ್-ಚಿಲಿಂಬಿ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿದ್ದು, ಇದು 33 ಮಹಡಿಗಳ ಅತ್ಯಾಧುನಿಕ ಸೌಲಭ್ಯಯುಳ್ಳ ಐಷಾರಾಮಿ ವಸತಿ ಸಮುಚ್ಚಯವಾಗಿದೆ. ಕೆಳಗಿನ ಹಾಗೂ ಮೇಲಿನ ತಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್ ಮತ್ತು ಮೇಲಿನ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಸೌಲಭ್ಯಗಳನ್ನು ಒಳಗೊಂಡಿದೆ. ಸ್ಕೈ ಗಾರ್ಡನ್ ವಸತಿ ಸಮುಚ್ಚಯವು ವಿಶಾಲವಾದ 3 ಬಿಎಚ್‌ಕೆ, 4 ಬಿಎಚ್‌ಕೆ ಹಾಗೂ 5 ಬಿಎಚ್‌ಕೆ ಅಪಾರ್ಟ್ಮೆಂಟ್‌ಗಳು ಹಾಗೂ ಎರಡು ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್‌ಗಳನ್ನು ಗ್ರಾಹಕರ ಆದ್ಯತೆಗೆ ಅನುಗುಣವಾಗಿ ನಿರ್ಮಿಸಲಾಗುವುದು.
ಸ್ಕೈ ಗಾರ್ಡನ್ ನಿವಾಸಿಗಳಿಗೆ ಝೆನ್ ರೂಂ, ಯೋಗ/ ಎರೋಬಿ̧ಕ್ಸ್, ಮಕ್ಕಳ ಅಧ್ಯಯನ ಕೊಠಡಿ, ಮಕ್ಕಳ ಆಟದ ಪ್ರದೇಶ, ವಾಕಿಂಗ್/ ಜಾಗಿಂಗ್ ಟ್ರಾಕ್, ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಟೇಬಲ್, ಚೆಸ್, ಕ್ಯಾರಮ್ ಮತ್ತು ಇತರ ಬೋರ್ಡ್ ಆಟಗಳ ಕೊಠಡಿ, ಕಾರ್ಡ್ಸ್ ರೂಮ್, ಮಿನಿ ಥಿಯೇಟರ್, ಸೌನಾ ಸ್ಟೀಮ್ ರೂಂ, ಜಕುಜಿ, ಕಟ್ಟಡದ ಪ್ರವೇಶದ್ವಾರದ ಬಳಿ ನೀರಿನ ಫೌಂಟೇನ್ ಹೊಂದಿರುವ ವೈಶಿಷ್ಟಯುತ ಗೋಡೆಗಳು, ಸಮ್ಮೇಳನ ಸಭಾಂಗಣ ಮತ್ತು ಇನ್ನೂ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುತ್ತವೆ.
*ಪೂರ್ವಜ್:* ಮಂಗಳೂರಿನ ಪ್ರಶಾಂತವಾದ ಪರಿಸರ ಹೊಂದಿರುವ ಶಿವಬಾಗ್‌ನಲ್ಲಿ ನಿರ್ಮಾಣಗೊಳ್ಳಲಿದ್ದು ತಳ ಮತ್ತು ಕೆಳಗಿನ ನೆಲ ಅಂತಸ್ತಿನಲ್ಲಿ ಕಾರ್ ಪಾರ್ಕ್ ಸೌಲಭ್ಯ ಹಾಗೂ ಮೇಲಿನ ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಅಲ್ಲದೆ ಉಳಿದ 12 ಮಹಡಿಗಳಲ್ಲಿ ವಿಶಿಷ್ಟ 4 ಬಿಎಚ್‌ಕೆ ಗೃಹಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿಗೂ ಒಂದೊಂದು ಅಪಾರ್ಟ್ಮೆಂಟ್ ಮಾತ್ರವಿದ್ದು ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲು ಸಾಧ್ಯವಾಗುವ ವಿಶಾಲ ಕೋಣೆಗಳು ಪೂರ್ವಜ್ ವಸತಿ ಸಮುಚ್ಚಯದ ವೈಶಿಷ್ಟ್ಯವಾಗಿದೆ.
ಪೂರ್ವಜ್‌ನಲ್ಲೂ, ರೂಫ್‌ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಬಿಲಿಯರ್ಡ್ಸ್ ಟೇಬಲ್, ಚೆಸ್/ ಕ್ಯಾರಮ್/ ಇತರ ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಜಿ, ಸಮ್ಮೇಳನ ಸಭಾಂಗಣ ಮುಂತಾದ ಆಧುನಿಕ ಸೌಲಭ್ಯಗಳು ಸಿದ್ಧಗೊಳ್ಳಲಿವೆ.
ಈ ಎರಡು ಪ್ರತಿಷ್ಟಿತ ವಸತಿ ಸಮುಚ್ಚಯಗಳ ಮೂಲಕ ನಿಧಿಲ್ಯಾಂಡ್ ಇನ್‌ಫ್ರಾಸ್ಟçಕ್ಚರ್ ಡೆವಲರ‍್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರಿನಲ್ಲಿ ಅತ್ಯಾಧುನಿಕವಾಗಿ ವಿಶಿಷ್ಟ ರೀತಿಯಲ್ಲಿ ಐಷಾರಾಮಿ ವಸತಿ ಸಮುಚ್ಚಯವನ್ನು ನಿರ್ಮಿಸುತಿದ್ದಾರೆ.


ನಿಧಿಲ್ಯಾಂಡ್ ಇನ್‌ ಫ್ರಾ ಸ್ಟ್ರಕ್ಚರ್ ಡೆವಲರ‍್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಪ್ರಶಾಂತ್ ಕೆ. ಸನಿಲ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಸಂಸ್ಥೆಯು ಆರಂಭವಾಗಿ 12 ವರ್ಷಗಳಾಗಿದ್ದು 11 ಯೋಜನೆಗಳನ್ನು ಪೂರ್ಣಗೊಳಿಸಿದೆ. ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ನಿರ್ಮಾಣದ ಹಂತದಲ್ಲಿದ್ದು, ವೈಟ್ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್ ಗ್ರೀನ್ ಸಂಸ್ಥೆಯ ಮುಂಬರುವ ಪ್ರಮುಖ ಯೋಜನೆಗಳಾಗಿವೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ಸಂಸ್ಥೆಯ ಬಗ್ಗೆ ಮತ್ತು ಸಂಸ್ಥೆಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಜಾಲತಾಣ nidhiland.com ಭೇಟಿ ನೀಡಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು