2:55 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಮಂಗಳೂರು ಸಂಚಾರ ಸಮಸ್ಯೆಗೆ ಅನುಪಮ ಸೇವೆ: ಟ್ರಾಫಿಕ್‌ ವಾರ್ಡನ್‌ ಮುಖ್ಯಸ್ಥ ಜೋ ಗೊನ್ಸಾಲ್ವಿಸ್‌ ಇನ್ನಿಲ್ಲ

29/08/2021, 21:40

ಮಂಗಳೂರು (reporterkarnataka.com):

ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಟ್ರಾಫಿಕ್‌‌‌ ವಾರ್ಡನ್‌‌ ಜೋ ಗೊನ್ಸಾಲ್ವಿಸ್‌ (99) ಅವರು ಭಾನುವಾರ ನಿಧನರಾದರು. ವಯೋ ಸಹಜ ಅಸೌಖ್ಯದಿಂದ ಅವರನ್ನು ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ.

1921ರಂದು ಜನಿಸಿದ್ದ ಗೊಲ್ಸಾಲ್ವಿಸ್‌ ಅವರು 
ಅವರು 100ನೇ ವಸಂತಕ್ಕೆ ಕಾಲಿಡಲು ಕೇವಲ 4 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಜನವರಿ 1 ಅವರ ಹುಟ್ಟಿದ ದಿನವಾಗಿತ್ತು.

ಫಳ್ನೀರ್‌ ನಿವಾಸಿಯಾಗಿರುವ ಜೋ ಗೊಲ್ಸಾಲ್ವಿಸ್‌ ಅವರು ಬ್ರಿಟಿಷ್‌‌ ಸಂಸ್ಥೆ ಜೆ.ಎಲ್‌ ಮೋರಿಸನ್‌‌ನಲ್ಲಿ
ಮ್ಯಾನೇಜ್‌ಮೆಂಟ್‌‌ ಟ್ರೈನಿಯಾಗಿ ಸೇರ್ಪಡೆಗೊಂಡಿದ್ದರು. ನಂತರ ಅವರು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಲಂಡನ್‌ ಇನ್‌ಸ್ಟಿಟ್ಯೂಟ್‌‌‌ ಆಫ್‌‌ ಮಾರ್ಕೆಟಿಂಗ್‌‌ನಲ್ಲಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯ ಚುನಾಯಿತ ಸದಸ್ಯರೂ ಆಗಿದ್ದರು. ನಿವೃತ್ತಿಯ ಬಳಿಕ ಜೋ ಅವರು ಶಿಕ್ಷಣ ಸಂಸ್ಥೆಗಳು ಹಾಗೂ ದತ್ತಿ ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು.

ಉತ್ತರ ಅಮೆರಿಕದ ಸೈಂಟ್ ಅಲೋಶಿಯಸ್ ಹಳೆಯ ವಿದ್ಯಾರ್ಥಿಗಳ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದರು. 
ಮಂಗಳೂರಿನ ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಪೊಲೀಸ್ ಇಲಾಖೆ ಜತೆ ಕೈಜೋಡಿಸಿದ್ದರು.

ಟ್ರಾಫಿಕ್‌ ವಿಭಾಗದ ನೆರವಿನೊಂದಿಗೆ 2015 ರಲ್ಲಿ 94 ನೇ ವಯಸ್ಸಿನಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಸುರಕ್ಷಿತ ಚಾಲನೆ ಸೇರಿದಂತೆ ಇತರ ಪ್ರಮುಖ ವಿಚಾರಗಳ ಬಗ್ಗೆ ಯುವಜನರೊಂದಿಗೆ ಅವರು ಸಂವಾದ ನಡೆಸುತ್ತಿದ್ದರು. ಅವರ ಸೇವೆ ಹಾಗೂ ಕೊಡುಗೆಗಾಗಿ ಟ್ರಾಫಿಕ್‌ ವಿಭಾಗ ಅವರನ್ನು ಗೌರವಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು