7:22 AM Sunday7 - June 2026
ಬ್ರೇಕಿಂಗ್ ನ್ಯೂಸ್
Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:… ಆರೋಗ್ಯ ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಹೊಸ ಮೈಲಿಗಲ್ಲು: ವೈದ್ಯರ ನೇರ ನೇಮಕಾತಿಗೆ… ಹೊಸ ರಾಜಕೀಯ ಹಾದಿಯತ್ತ ಅಣ್ಣಾಮಲೈ: ಕರ್ನಾಟಕದ ಸಿಂಗಂನಿಂದ ಹೊಸ ಪಕ್ಷ ಘೋಷಣೆ ತಿತಿಮತಿ | ಕಾಡಾನೆ ದಾಳಿ: ಕಾಫಿ ತೋಟ ವೀಕ್ಷಿಸಲು ಹೋಗಿದ್ದ ಐಜಿ ಪತ್ನಿ… ಚಿಕ್ಕಮಗಳೂರು: ಕರೆದ ಕೂಡಲೇ ಬರಲಿಲ್ಲವೆಂದು ಕೆಫೆ ಕಾರ್ಮಿಕನ ಮೇಲೆ ಹಲ್ಲೆ ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ…

ಇತ್ತೀಚಿನ ಸುದ್ದಿ

ರಾಯಲ್ಪಾಡು ಕಾಶೀವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭೇಟಿ 

22/05/2021, 15:15

ಶ್ರೀನಿವಾಸಪುರ(reporterkarnataka news) : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಹಿಂದೆ ಸಹ  ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಹೊರರಾಜ್ಯದ ಮಹಾರಾಷ್ಟ್ರ ,ಆಂಧ್ರಪ್ರದೇಶ, ತಮಿಳುನಾಡು ,ರಾಜಕಾರಣಿಗಳು ಸಹ ದೇವರ ದರ್ಶನ ಪಡೆದಿದ್ದಾರೆ. ಚಿತ್ರನಟ ಚಿರಂಜೀವಿ ಅವರು ಸಹ ಪ್ರಸಿದ್ಧ ಜ್ಯೋತಿಷ ತಜ್ಞರಾದ ವೆಲ್ಲಾಲ ಸತ್ಯ ನಾರಾಯಣ ಶಾಸ್ತ್ರಿ ಬಳಿ ಭವಿಷ್ಯದ ಬಗ್ಗೆ ಚರ್ಚೆ ಆಶೀರ್ವಾದ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.  ಡಿ.ಕೆ.ಶಿವಕುಮಾರ್‌ ದೇವರ ದರ್ಶನ ಪಡೆದರು.  ಅರ್ಚಕರಾದ ವಿಶ್ವನಾಥ ಶಾಸ್ತ್ರಿ ಅವರು ವಿಶೇಷ ಪೂಜೆ ನೆರವೇರಿಸಿದರು . ನಂತರ ಪ್ರಸಿದ್ಧ ಜ್ಯೋತಿಷ ಶಾಸ್ತ್ರ ತಜ್ಞರಾದ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರ ಬಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಾಜ್ಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು. ನಂತರ ಅವರನ್ನು ವೆಲ್ಲಾಲ ಸತ್ಯ ನಾರಾಯಣ ಶಾಸ್ತ್ರಿ ಮತ್ತು ಸಹೋದರ ವಿಶ್ವನಾಥ ಶಾಸ್ತ್ರಿ ಅವರು ದೇವಸ್ಥಾನ ಆವರಣದಲ್ಲಿ ಸನ್ಮಾನಿಸಿದರು. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ , ನಿರ್ದೇಶಕ ಅನಿಲ್‌ಕುಮಾರ್‌ ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು