8:31 PM Tuesday13 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಕೋವಿಡ 19′ ರ ಸಂದರ್ಭದಲ್ಲಿ ‘ಮಾನಸಿಕ ಯೋಗಕ್ಷೇಮ’ ಆನ್ಲೈನ್ ಕಾರ್ಯಾಗಾರ  

22/05/2021, 15:19

ಮಂಗಳೂರು(reporterkarnataka news); ಕೆನರಾ ಕಾಲೇಜು, ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆಯು   “ಕೋವಿಡ 19 ರ ಸಂದರ್ಭದಲ್ಲಿ ಮಾನಸಿಕ ಯೋಗಕ್ಷೇಮ” ಎಂಬ ಕಾರ್ಯಾಗಾರವನ್ನು ಆನ್ಲೈನ್  ಮೂಲಕ ಹಮ್ಮಿಕೊಂಡಿತ್ತು.

ಕಾರ್ಯಾಗಾರದ  ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ರಾ.ಸೇ.ಯೋ ಕೋವಿಡ್ ನೋಡಲ್ ಅಧಿಕಾರಿ  ಡಾ.  ಶೇಷಪ್ಪ ಅಮೀನ್ ಕೆ.ನೆರವೇರಿಸಿದರು. ಉದ್ಘಾಟನಾ ಮಾತುಗಳನ್ನಾಡಿದ ಡಾ.  ಶೇಷಪ್ಪ ಅಮೀನ್ ಇವರು ಜನರಲ್ಲಿ ಕೊರೋನಾ ದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಹಾಗೂ ಅಪನಂಬಿಕೆಗಳನ್ನು ವೈಜ್ಞಾನಿಕ ದೃಷ್ಟಿಕೋನದ ಕಡೆಗೆ ತೆಗೆದುಕೊಂಡು ಹೋಗಬೇಕು ಎಂಬ ಕಿವಿಮಾತುಗಳನ್ನು ಆಡಿದರು. ಇದರ ಜೊತೆಗೆ ನಮ್ಮ ಮನಸ್ಥಿತಿಯನ್ನು ಉತ್ತಮವಾಗಿ ಇರಿಸಿಕೊಳ್ಳಬೇಕು ಎಂಬ ತಿಳುವಳಿಕೆಯನ್ನು ನೀಡಿದರು. ಕೋವಿಡ್ ಸಂದರ್ಭದಲ್ಲಿ ಆನ್ಲೈನ್ ತರಗತಿಗಳು ಜೀವನದ ಕ್ರಮವಾಗಿದೆ. ಎನ್.ಎನ್.ಎಸ್ ಸ್ವಯಂಸೇವಕರು ಮಾನಸಿಕ ಆರೋಗ್ಯದ ವಿಚಾರವಾಗಿ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ತಲುಪಿಸಿದಾಗ , ಕಾರ್ಯಾಗಾರದ ಉದ್ದೇಶ ಸಫಲವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿ ಕೊಂಡ ಕೆನರಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ.  ಅವರು ವ್ಯಾಯಾಮ ಹಾಗೂ ಉತ್ತಮ ಆಹಾರ ಸೇವನೆಯನ್ನು ಮಾಡುವ ಮೂಲಕ ಮಾನಸಿಕ ಹಾಗು ದೈಹಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಸಹ್ಯಾದ್ರಿ ಕಾಲೇಜಿನ ಆರೋಗ್ಯ ಮತ್ತು ಸಮಾಲೋಚನಾ ಕೇಂದ್ರದ ಸಲಹೆಗಾರ ಅಂಕಿತ್ ಎಸ್ ಕುಮಾರ್ ಅವರು ಈ ಕೋವಿಡ ಪರಿಸ್ಥಿತಿಯಲ್ಲಿ ನಮಗೆ ಬೇಕಾದಂತಹ ಮಾನಸಿಕ ಯೋಗಕ್ಷೇಮದ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಇವರು ಮನಸ್ಸನ್ನು ಶುದ್ಧವಾಗಿ ಹಾಗೂ ಸ್ಥಿರವಾಗಿ ಇರಿಸಿಕೊಳ್ಳುವಂತೆ ಸೂಚಿಸಿದರು. ನಾವು ಯಾವುದೇ ವಿಷಯದ ಬಗ್ಗೆ ಹೆಚ್ಚಾಗಿ ಚಿಂತಿಸದೆ ಜೀವಿಸಬೇಕು. ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಹಾಗೂ ನಮಗೆ ಇಷ್ಟವಾದಂತಹ ಕೆಲಸಗಳನ್ನು ಮಾಡುತ್ತಿರಬೇಕು. ಮುಂದೇನಾಗುತ್ತದೆ ಎಂಬುದನ್ನು ಚಿಂತಿಸದೆ ಆ ಕ್ಷಣದಲ್ಲಿ ಜೀವಿಸಬೇಕು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ,ಅತಿಯಾದ ಚಿಂತೆಯೂ ನಮ್ಮ ಜೀವನದ ಖುಷಿಯನ್ನು ಕಿತ್ತುಕೊಳ್ಳುತ್ತದೆ.ನಮಗೆ ನಡೆಯುತ್ತಿರುವ ವಿಷಯ ದ ಬಗ್ಗೆ ಗಮನ, ಸ್ಪಷ್ಟತೆ ಹಾಗೂ ಏಕಾಗ್ರತೆ ಇರಬೇಕು ಎಂದು ನುಡಿದರು.  ಸರಿಯಾದ ಉಸಿರಾಟ ಮಾಡುವ ವಿಧಾನವನ್ನು ಪ್ರಾತ್ಯಕ್ಶಿಕೆಯ ಮೂಲಕ ತಿಳಿಸಿಕೊಟ್ಟರು.


ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಕಾರ್ಯಾಗಾರದ ಆಯೋಜಕರಾದ ಸೀಮಾ ಪ್ರಭು ಎಸ್. ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಇನ್ನೊರ್ವ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಾವ್ಯಶ್ರೀ  ಧನ್ಯವಾದ ಸಮರ್ಪಿಸಿದರು. ಸ್ವಯಂಸೇವಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು