10:29 PM Wednesday30 - September 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

Puttur | ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಪಾಕ ಶಾಲೆ ಉದ್ಘಾಟನೆ: ಗ್ರಾಹಕರಿಗೆ ಭೋಜನ ಹಾಗೂ ಉಪಹಾರ

18/04/2025, 21:13

ಪುತ್ತೂರು(reporterkarnataka.com): ಸದಾ ಹೊಸತನ ಮತ್ತು ವಿಶೇಷತೆಗಳಿಗೆ ಹೆಸರಾದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಗ್ರಾಹಕರಿಗೆ ಮತ್ತು ಸಿಬಂದಿಗಳಿಗೆ ಮನೆ ಪದ್ಧತಿಯ ಅಪರಾಹ್ನ ಭೋಜನ ಹಾಗೂ ಸಂಜೆ ಉಪಹಾರ ನೀಡುವ ನೂತನ ಪಾಕಶಾಲೆ ಹಾಗೂ ಭೋಜನ ಶಾಲೆ ಆರಂಭಿಸಿದೆ.

ಮನೆ ಮನ ಗೆದ್ದಿರುವ ಯುವ ಉದ್ಯಮಿ ಹಾಗೂ ಭಟ್ ಅಂಡ್ ಭಟ್ ಖ್ಯಾತಿಯ ಸುದರ್ಶನ್ ಭಟ್ ಅವರು ಈ ಶಾಲೆಯನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ ಮಾತನಾಡುತ್ತಾ ” ಗ್ರಾಹಕ ಸಂತೃಪ್ತಿಯ ಅದ್ಯತೆಯಲ್ಲಿ ಸಿಬಂದಿಗಳಿಗೂ ಒಳಗೊಂಡಂತೆ ಅಪರಾಹ್ನ ಊಟ ಹಾಗೂ ಸಂಜೆಯ ಉಪಹಾರ ವ್ಯವಸ್ಥೆಯ ಬಗ್ಗೆ ” ವಿವರಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಪ್ರದೀಪ್ ಕುಮಾರ್ ಬಡೆಕ್ಕಿಲ ಮಾತನಾಡುತ್ತ ಚಿನ್ನದ ಮಳಿಗೆಯಲ್ಲಿ ಚಿನ್ನದಂತ ಪ್ರೀತಿ, ಕುಟುಂಬ ರೀತಿಯ ಊಟ ಉಪಚಾರ ಇದಾಗಿದೆ ಎಂದು ಈ ವ್ಯವಸ್ಥೆಯನ್ನು ಶ್ಲಾಘಿಸಿದರು.
ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ “ನಮ್ಮಲ್ಲಿ ರಾಸಾಯನಿಕ ಮುಕ್ತ ಪದಾರ್ಥಗಳಿಂದಲೇ ಊಟ ಉಪಹಾರ ತಯಾರಿಸಿ ಮನೆ ಪದ್ದತಿಯಲ್ಲಿ ಸಿಬಂದಿಗಳಿಗೆ ಮತ್ತು ಗ್ರಾಹಕರಿಗೆ ಉಣ ಬಡಿಸುವ ವ್ಯವಸ್ಥೆ, ಗ್ರಾಹಕರಿಗೆ ಸಂತೋಷ ಮತ್ತು Existence ಹೊಸ ಹೆಜ್ಜೆ ” ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು