9:45 PM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮಾರ್ಚ್ ತಿಂಗಳ ಟಾಪರ್ ಆಗಿ ಚಾತುರ್ಯ ಎಕ್ಕಾರ್ ಮತ್ತು ವಿನುತಾ ಮೊಗವೀರ ಆಯ್ಕೆ

18/04/2025, 20:00

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಚಾತುರ್ಯ ಎಕ್ಕಾರ್ ಮತ್ತು ವಿನುತಾ ಮೊಗವೀರ
ಆಯ್ಕೆಯಾಗಿದ್ದಾರೆ.


ಚಾತುರ್ಯ ಎಕ್ಕಾರ್, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಎಕ್ಕಾರು ಗ್ರಾಮದ ವಾಸು ಎಕ್ಕಾರ್ ಮತ್ತು ಸಂಧ್ಯಾ ವಾಸು ಎಕ್ಕಾರ್ ಅವರ ಪ್ರಥಮ ಪುತ್ರಿ. ಇವಳು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುಕೆಜಿಯಲ್ಲಿ ಓದುತ್ತಿದ್ದಾಳೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನ ಹಾಗೆ ಪ್ರಥಮವಾಗಿ ಕೃಷ್ಣ ವೇಷದ ಮೂಲಕ ವೇದಿಕೆ ಹತ್ತಿದ ಇವಳು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಾರಿ ಪ್ರಥಮ, ದ್ವಿತೀಯ ಬಹುಮಾನ ಪಡೆದಿರುತ್ತಾಳೆ. ಚಿಕ್ಕಂದಿನಲ್ಲೇ ನೃತ್ಯ, ಸಂಗೀತ, ಚಿತ್ರಕಲೆ ಮತ್ತು ವೇಷಭೂಷಣದ ಬಗ್ಗೆ ಆಸಕ್ತಿ ಹೊಂದಿದ್ದು ಹಲವಾರು ಬಾರಿ ನೃತ್ಯ ಸ್ಪರ್ಧೆ, ಛದ್ಮವೇಷ ಮತ್ತು ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾಳೆ. ನವರಾತ್ರಿ ಸಮಯದಲ್ಲಿ ಉಚ್ಚಿಲ ದಸರಾದಲ್ಲಿ ಶಾರದೆಯ ವಿಭಿನ್ನ ವೇಷಭೂಷಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾಳೆ. ಪ್ರಸ್ತುತ ಪದ್ಮಶ್ರೀ ಅವರ ಸಹಕಾರದಿಂದ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಹಲವಾರು ಬಾರಿ ನೃತ್ಯ ಕಾರ್ಯಕ್ರಮ ನೀಡಿರುತ್ತಾಳೆ. ದಿನಕೊಂದು ಗಾದೆ ಮಾತು, ನೃತ್ಯವನ್ನು ವಾಯ್ಸ್ ಆಫ್ ಆರಾಧನ ತಂಡದ ವಾಟ್ಸ್ ಆಪ್ ಗ್ರೂಪಲ್ಲಿ ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾಳೆ. ಅಭಿಮತ ಟಿವಿ ಚಾನಲ್ ನಲ್ಲಿ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನೀಡಿರುತಾಳೆ. ಪ್ರಸ್ತುತ ಭರತ ನಾಟ್ಯ ತರಗತಿಯನ್ನು ಶ್ರಾವ್ಯ ಕಿಶೋರ್ ಕಟೀಲು ಅವರಿಂದ ಪಡೆಯುತಿದ್ದಾಳೆ. ಅರುಣಾ ರಾವ್ ಕಟೀಲ್ ಅವರಿಂದ ಭಜನೆ ಹಾಗೂ ಕುಣಿತ ಭಜನೆ ತರಗತಿಯನ್ನು ಪಡೆಯುತಿದ್ದಾಳೆ. ಈಶ್ವರ್ ಕಟೀಲ್ ಹಾಗೂ ಮೊರ್ಗನ್ ವಿಲೀಮ್ಸ್ ಅವರಿಂದ ಕರಾಟೆ ತರಗತಿಯನ್ನು ಪಡೆಯುತ್ತಿದ್ದಾಳೆ. ಓದಿನಲ್ಲಿ ಮುಂಚೂಣಿಯಲ್ಲಿದ್ದು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾಳೆ. ಶಾಲೆಯ ಎಲ್ಲಾ ಅಧ್ಯಾಪಕರು, ಮನೆಯವರು ಹಾಗೂ ವಾಯ್ಸ್ ಆಫ್ ಆರಾಧನಾ ತಂಡದ ಎಲ್ಲಾ ಸದಸ್ಯರ ಪ್ರೋತ್ಸಹದಿಂದ ಈ ಪುಟ್ಟಪ್ರತಿಭೆಯು ಬೆಳೆಯುತಿದ್ದಾಳೆ.
ಮೂಲತಃ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ತಾರಿಬೇರಿನ ರಾಘವೇಂದ್ರ ಮೊಗವೀರ ಹಾಗೂ ನಾಗರತ್ನ ದಂಪತಿಯ ಪುತ್ರಿ ವಿನುತಾ ಮೊಗವೀರ. ಇವಳು ಉತ್ತರ ಕನ್ನಡ ಜಿಲ್ಲೆಯ ಮೂಂಡಗೋಡ ತಾಲೂಕಿನಲ್ಲಿ ತಂದೆ ತಾಯಿಯ ಜೊತೆ ನೆಲೆಸಿರುತ್ತಾಳೆ. 7ನೇ ತರಗತಿ ಓದುತ್ತಿರುವ ಈಕೆ ಭರತನಾಟ್ಯವನ್ನು ಕಳೆದ 5 ವರ್ಷಗಳಿಂದ ಗುರುಗಳಾದ ನಾಟ್ಯ ಮಯೂರಿ ನೃತ್ಯ ಕಲಾಕೇಂದ್ರದ ಶಶಿರೇಖಾ ಬೈಜು ಅವರಲ್ಲಿ ಕಲಿಯುತ್ತಿದ್ದಾಳೆ. ಮಹಾರಾಷ್ಟ್ರ ಬೋರ್ಡ್ ನಡೆಸುವ ಗಂಧರ್ವ ಎಕ್ಸಾಂನಲ್ಲಿ 1st level ಬರೆದಿದ್ದು ರ್ಯಾಂಕ್ ಬಂದಿರುತ್ತಾಳೆ. ಎರಡನೇ level ಇವಾಗ ಬರೆಯುತ್ತಾಳೆ. ಕಳೆದ ವರ್ಷ ನಡೆದ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ರಾಜ್ಯಮಟ್ಟದ ಜೂನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಳಾಗಿದ್ದಾಳೆ. ಕಳೆದ 5 ವರ್ಷಗಳಿಂದ ಮುಂಡಗೋಡ
ಶ್ರೀ ಮಾರಿಕಾಂಬೆ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವದಲ್ಲಿ ಭರತನಾಟ್ಯ ಮಾಡುತ್ತಾ ಬಂದಿದ್ದಾಳೆ. ಶ್ರೀರಾಮನ ಪ್ರತಿಷ್ಠಾಪನೆಯ ಅಂಗವಾಗಿ ಮುಂಡಗೋಡದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಹಾಗೆಯೇ ಜ್ಞಾನಶ್ರೀ ನವೋದಯ ತರಬೇತಿ ಕೇಂದ್ರ ಮುಂಡಗೋಡ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡಗೋಡ ಮತ್ತು ಕಾತುರ ಮಾರಿಕಾಂಬ ದೇವಸ್ಥಾನ ಮುಂಡಗೋಡ ಮತ್ತು ಸುಕ್ಷೇತ್ರ ಇಂದೂರ ಗ್ರಾಮದೇವಿ ದೇವಸ್ಥಾನ ಇಂದೂರು ಈ ಎಲ್ಲಾ ಕಡೆ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ. ಹಾಗೆಯೇ 2025-26ರ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದಲ್ಲಿ Vioce of Aradana ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು