ಇತ್ತೀಚಿನ ಸುದ್ದಿ
Chikkamagaluru | ಚಾರ್ಮಾಡಿ ಘಾಟಿಯಲ್ಲಿ ಹೆಚ್ಚುತ್ತಿರುವ ಒಂಟಿ ಸಲಗದ ಕಾಟ: ಕಾರು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು
18/04/2025, 10:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗದ ಕಾಟ ಮಿತಿ ಮೀರಿದ್ದು, ಕಾರು ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಆನೆ ಕಂಡರೂ ಕಾರು ಚಾಲಕ ಆನೆಯ ಪಕ್ಕದಲ್ಲೇ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಅದೃಷ್ಟವತಾಶ್, ಆನೆ ಒಂದು ಹೆಜ್ಜೆ ಹಿಂದೆ ಸರಿದಿದೆ. ಎಲ್ಲದರೂ ಒಂಟಿ ಸಲಗ ಸೊಂಡಿಲಿನಲ್ಲಿ ಒಂದು ಏಟು ಕೊಡುತ್ತಿದ್ದರೂ ಕಾರು ನಿಂತು ಹೋಗುತ್ತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಳೆದ ರಾತ್ರಿ ಸರ್ಕಾರಿ ಬಸ್ಸಿಗೆ ಒಂಟಿ ಸಲಗ ಅಡ್ಡ ನಿಂತಿತ್ತು. ನಿನ್ನೆ ಸಂಜೆ ಕೂಡ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಒಂಟಿ ಸಲಗ ನಿಂತಲ್ಲೇ ನಿಂತಿತ್ತು. ಘಾಟಿಯಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಚಾರ್ಮಾಡಿ ಘಾಟ್ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತ ಆನೆ ದಾಳಿಗೆ ಮುಂದಾದ್ರೆ ತಪ್ಪಿಸಿಕೊಳ್ಳೋದು ಬಹಳ ಕಷ್ಟ.