ಇತ್ತೀಚಿನ ಸುದ್ದಿ
Mangaluru | ಬೋಳಾರ: ಮದುವೆಯ ಮುನ್ನ ದಿನ ವಧು ಪರಾರಿ; ಮೆಹಂದಿ ಹಾಕಿಸಿಕೊಳ್ಳುವುದಾಗಿ ತೆರಳಿದಾಕೆ ನಾಪತ್ತೆ
18/04/2025, 00:39

ಮಂಗಳೂರು(reporterkarnataka.com): ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ವಿವಾಹದ ಮುನ್ನಾ ದಿನ ನಾಪತ್ತೆಯಾದ ಘಟನೆ ನಗರದ ಬೋಳಾರದಲ್ಲಿ ನಡೆದಿದೆ.
ಬೋಳಾರದ ನಿವಾಸಿಯಾದ ಪಲ್ಲವಿ (22) ಎಂಬಾಕೆ ನಾಪತ್ತೆಯಾದ ಯುವತಿ. ಈಕೆಯ ಒಪ್ಪಿಗೆಯಂತೆ ಎ. 16ರಂದು ವಿವಾಹ ನಿಗದಿಯಾಗಿತ್ತು. ಎ. 15ರಂದು ಮಧ್ಯಾಹ್ನ ಆಕೆ ಮೆಹಂದಿ ಹಾಕಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬೋಳಾರದ ಮನೆಯಿಂದ ಒಬ್ಬಳೇ ಹೋದ್ದಳು. ಆದರೆ ಆಕೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಈ ಕುರಿತು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ. 5 ಅಡಿ ಎತ್ತರ, ಬಿಳಿ ಮೈಬಣ್ಣ ಸಾಧಾರಣ ಶರೀರ, ಕಪ್ಪು ಉದ್ದ ಕೂದಲು ಹೊಂದಿದ್ದು ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾಳೆ. ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದಳು.