11:42 AM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ ಕಡಿಮೆ, ಬೆಲೆಯ ಮೇಲೂ ಬರೆ!

17/04/2025, 22:39

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ರಾಜ್ಯದ ಮಾವು ತೋಟಗಳ ಹೃದಯಭಾಗವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ವರ್ಷದ ಮಾವು ಸುಗ್ಗಿಗೆ ಇನ್ನೂ ಕೇವಲ ಒಂದು ತಿಂಗಳು ಬಾಕಿಯಿದ್ದು, ಈ ಬಾರಿ ಇಳುವರಿ ಹಾಗೂ ಮಾರಾಟದ ಬಗ್ಗೆ ರೈತರು ಮತ್ತು ವ್ಯಾಪಾರಸ್ಥರಲ್ಲಿ ಆತಂಕ ಮನೆಮಾಡಿದೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 59 ಸಾವಿರ ಎಕರೆ ಪ್ರದೇಶದಲ್ಲಿ ಮಾವಿನ ತೋಟಗಳು ಹರಡಿದ್ದು, ಇದು ಈ ಭಾಗದ ಮುಖ್ಯ ಕೃಷಿ ಆಧಾರಿತ ಆರ್ಥಿಕತೆಯ ಭಾಗವಾಗಿದೆ. ಟೊಮ್ಯಾಟೋ, ಇತರ ತರಕಾರಿಗಳೊಂದಿಗೆ ಮಾವು ಕೂಡ ಪ್ರಮುಖ ಹಣಕಾಸು ಆದಾಯದ ಮೂಲವಾಗಿದೆ.
ಈ ವರ್ಷ ಪ್ರಾರಂಭದಲ್ಲಿ ಮಾವಿನ ಗಿಡಗಳಲ್ಲಿ ಉತ್ತಮ ಪ್ರಮಾಣದಲ್ಲಿ ಹೂವುಗಳು ಕಾಣಿಸಿಕೊಂಡಿದ್ದರೂ, ತೀವ್ರ ಗಾಳಿ ಮತ್ತು ಅಕಾಲಿಕ ಮಳೆಯಿಂದ ಹೂವು ಉದುರಿಕೊಂಡು, ಇಳುವರಿ ತೀವ್ರವಾಗಿ ಹಿಂಜರಿದಿದೆ. ಮೂಲಗಳ ಪ್ರಕಾರ, ಈ ವರ್ಷ ಕೇವಲ ಶೇಕಡಾ 30ರಷ್ಟೇ ಇಳುವರಿ ನಿರೀಕ್ಷೆ ಇದೆ.
ಸಾಮಾನ್ಯವಾಗಿ ಮೇ 15ರಿಂದ ಆರಂಭವಾಗುವ ಮಾವಿನ ಮಾರುಕಟ್ಟೆ ಚಟುವಟಿಕೆಗಳು ಈ ವರ್ಷವೂ ಆಗುವ ಸಾಧ್ಯತೆಯಿದೆ. ಆದರೆ ಕಡಿಮೆ ಇಳುವರಿಯ ಪರಿಣಾಮವಾಗಿ, ಮಾರುಕಟ್ಟೆ ಚಟುವಟಿಕೆಗಳು ಕೇವಲ ಎರಡು ತಿಂಗಳು ಮಾತ್ರ ಸೀಮಿತವಾಗಬಹುದೆಂದು ಅಂದಾಜಿಸಲಾಗಿದೆ.
ಇನ್ನೊಂದು ಕಡೆ, ಬೆಲೆಗೂ ನಿರೀಕ್ಷೆಯಿಲ್ಲ ಎಂಬ ಸ್ಥಿತಿಯಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಇತರ ರಾಜ್ಯಗಳಿಂದಲೂ ಈ ಅವಧಿಯಲ್ಲಿ ಮಾವು ಮಾರುಕಟ್ಟೆಗೆ ಬರಲಿರುವುದರಿಂದ ಸ್ಪರ್ಧೆ ಉಂಟಾಗಲಿದೆ. ಇದರ ಪರಿಣಾಮವಾಗಿ ಶ್ರೀನಿವಾಸಪುರದ ಮಾವಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಕಡಿಮೆಯಾಗಿರುವುದಾಗಿ ವ್ಯಾಪಾರ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.


ರೋಗಗಳು ನಿಯಂತ್ರಣಕ್ಕೆ ಹಾಗೂ ಹೆಚ್ಚು ಇಳುವರಿ ಸಿಗಲೆಂದು ರೈತರು ಹಾಗೂ ವ್ಯಾಪಾರಸ್ಥರು ಔಷಧ ಸಿಂಪಡನೆ ಸೇರಿದಂತೆ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿದ್ದಾರೆ. ಇತ್ತ, ಮೌಲ್ಯಯುತ ಮಾವು ಪಡೆಯುವ ನಿರೀಕ್ಷೆಯಲ್ಲಿ ಹಲವರು ರೈತರಿಂದ ಮುಂಗಡವಾಗಿ ಮಾವಿನ ಕಾಯಿಗಳನ್ನು ಖರೀದಿಸಿದ್ದಾರೆ. ಆದರೆ ಇಳುವರಿ ನಿರೀಕ್ಷೆ ಮಿತವಾಗಿರುವುದರಿಂದ ಬಂಪರ್ ಲಾಭದ ಕನಸು ಈಗ ತೂಗುತಿದ್ದ ಗಾಜಿನಂತೆ ಕಾಣುತ್ತಿದೆ.
ಈ ಬಾರಿ ಮಾವಿನ ಇಳುವರಿ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತಿದ್ದು, ಇದು ರೈತರು ಮತ್ತು ವ್ಯಾಪಾರಸ್ಥರ ಆತ್ಮವಿಶ್ವಾಸಕ್ಕೆ ಆಘಾತವಾಗಿದೆ. ಸುಗ್ಗಿ ಆರಂಭವಾದ ಬಳಿಕವೇ ನಿಜವಾದ ಸ್ಥಿತಿ ತಿಳಿಯಲಿದ್ದು, ಈ ಬಾರಿ ಮಾರುಕಟ್ಟೆ ಲಾಭದಾಯಕವಾಗುತ್ತದೆಯೋ ಅಥವಾ ಮತ್ತಷ್ಟು ನಷ್ಟವನ್ನು ತರುವುದೋ ಎಂಬುದನ್ನು ಕಾಲವೇ ತೋರಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು