ಇತ್ತೀಚಿನ ಸುದ್ದಿ
Chikkamagaluru |ಮೂಡಿಗೆರೆ: ಮನೆ ಬಾಗಿಲಿಗೆ ಆಗಮಿಸಿದ ಒಂಟಿ ಸಲಗ; ಗ್ರಾಮಸ್ಥರಲ್ಲಿ ಆತಂಕ
17/04/2025, 15:33

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಲ್ಲಿ ಮನೆ ಬಾಗಿಲಿಗೆ ಒಂಟಿ ಸಲಗ ಆಗಮಿಸಿದೆ.
ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಈ ಗ್ರಾಮ ಘಟನೆ ನಡೆದಿದೆ.
ಕಾಫಿನಾಡಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ ಉಂಟಾಗಿದ್ದು, ಯಶವಂತ್ ಎಂಬುವರ ಮನೆ ಬಾಗಿಲಿಗೆ ಒಂಟಿ ಸಲಗ ಆಗಮಿಸಿದೆ.
ಆನೆ ಬಂದ ದೃಶ್ಯವನ್ನು ಮೊಬೈಲ್ ನಲ್ಲಿ ಮನೆ ಮಾಲೀಕ ಸೆರೆ ಹಿಡಿದಿದ್ದಾರೆ.
ಆನೆ ಗ್ರಾಮಕ್ಕೆ ಬಂದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಮನೆಯಿಂದ ಹೊರಬರಲು ಜನರ ಹಿಂದೇಟು ಹಾಕುತ್ತಿದ್ದಾರೆ.