ಇತ್ತೀಚಿನ ಸುದ್ದಿ
Deadbody |ಕೊಪ್ಪ: ತುಂಗಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಯುವಕ ಮೃತದೇಹ 2 ದಿನಗಳ ಬಳಿಕ ಪತ್ತೆ
08/04/2025, 22:28

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಪ್ಪ ತಾಲೂಕಿನ ನುಗ್ಗೆಮಕ್ಕಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಯುವಕ ಮೃತದೇಹ ಪತ್ತೆಯಾಗಿದೆ.
ಭಾನುವಾರ ತುಂಗಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಮನೋಜ್ ಎಂಬ ಯುವಕ ನಾಪತ್ತೆಯಾಗಿದ್ದ. 2 ದಿನಗಳಿಂದ ಶಾಮಕ ಸಿಬ್ಬಂದಿಗಳು, ಪೊಲೀಸರು ಶೋಧ ಕಾರ್ಯ ನಡೆಸಿದ್ದರು.
6 ಜನ ಸ್ನೇಹಿತರೊಂದಿಗೆ ಮನೋಜ್ ಈಜಲು ತೆರಳಿದ್ದರು. ಇದೀಗ
ಹರಿಹರಪುರದ ಗುರುಕುಲ ಬಳಿ ಮನೋಜ್ ಮೃತದೇಹ ಪತ್ತೆಯಾಗಿದೆ.
ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.