12:42 AM Monday7 - April 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

ಮಂಗಳೂರು ಧರ್ಮ ಪ್ರಾಂತ್ಯ: ಎಪಿಸ್ಕೋಪಲ್ ಸಿಟಿ ವಲಯದಲ್ಲಿ ತಪಸ್ಸು ಕಾಲದ 3 ದಿನಗಳ ಬೈಬಲ್ ಆಧಾರಿತ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ

06/04/2025, 20:57

ಮಂಗಳೂರು(reporterkarnataka.com): ಕ್ಯಾಥೋಲಿಕ್ ಕ್ರೈಸ್ತ ಧರ್ಮ ಸಭೆಯು ಭರವಸೆಯ ಯಾತ್ರಿಕರು ಎಂಬ ಧ್ಯೇಯದೊಂದಿಗೆ ಜುಬಿಲಿ ವರ್ಷ 2025 ನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ಮಂಗಳೂರು ಧರ್ಮ ಪ್ರಾಂತ್ಯದ ಎಪಿಸ್ಕೋಪಲ್ ಸಿಟಿ ವಲಯವು ಆಧ್ಯಾತ್ಮಿಕ ನವೀಕರಣದ ಉದ್ದೇಶವನ್ನು ಇರಿಸಿಕೊಂಡು ತಪಸ್ಸು ಕಾಲದ
ಬೈಬಲ್ ಆಧಾರಿತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನೆ ಭಾನುವಾರ ನೆರವೇರಿತು.
ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ತೆರೆದ ಮೈದಾನದಲ್ಲಿ ನಡೆದ ಸಮಾ ರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು 3 ದಿನಗಳ ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವಿಶಿಷ್ಟವಾದ ಸ್ಪರ್ಧೆಯು ಬೈಬಲ್- ಆಧಾರಿತ ಕಿರು ನಾಟಕ ಪ್ರದರ್ಶನ ಮತ್ತು ಕೀರ್ತನೆ ಹಾಡುವ ಸ್ಪರ್ಧೆಗಳನ್ನು ಒಳಗೊಂಡಿದೆ, ಎಪಿಸ್ಕೋಪಲ್ ಸಿಟಿ ವಲಯ ವ್ಯಾಪ್ತಿಯಲ್ಲಿ 11 ಚರ್ಚ್ ಗಳು ಬರುತ್ತಿವೆ.
ಸಮುದಾಯದ ಸಂಪರ್ಕವನ್ನು ಬಲ ಪಡಿಸುವುದು ಮತ್ತು ಸುವಾರ್ತೆಯನ್ನು ಆಧರಿಸಿ ಜೀವಿಸುವ ನವೀಕರಣದ ಬದ್ಧತೆಯನ್ನು ಪ್ರೇರೇಪಿಸುವ ಗುರಿಯನ್ನು ಇದು ಹೊಂದಿದೆ.
“ದೇವರ ವಾಕ್ಯದ ಪ್ರಕಾರ ಬದುಕುವವರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ. ದೇವರ ವಾಕ್ಯವು ಕೇವಲ ಪಠ್ಯವಲ್ಲ; ಇದು ಜೀವನ ವಿಧಾನವಾಗಿದೆ ಎಂದು ಬಿಷಪ್ ಹೇಳಿದರು.
ಸಮಾರಂಭದಲ್ಲಿ ವಿಕಾರ್ ಜನರಲ್ ಅತಿ ವಂದನೀಯ
ಮ್ಯಾಕ್ಸಿಮ್ ಎಲ್. ನೊರೊನ್ಹಾ, ಚಾನ್ಸಲರ್ ಫಾದರ್ ವಿಕ್ಟರ್ ಜಾರ್ಜ್ ಡಿ’ಸೋಜಾ, ಜಪ್ಪು ಸೆಮಿನರಿಯ ರೆಕ್ಟರ್ ಫಾ. ರೊನಾಲ್ಡ್ ಸೇರಾವೋ, ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ಜೆ.ಬಿ.ಸಲ್ಡಾನ್ಹಾ, ಫಾ. ಮ್ಯಾಕ್ಸಿಂ ಡಿಸೋಜಾ, ಫಾ. ವಾಲ್ಟರ್ ಡಿಸೋಜಾ , ಫಾ. ಜೆ. ಬಿ. ಕ್ರಾಸ್ತಾ, ಫಾ. ಎರಿಕ್ ಕ್ರಾಸ್ತಾ, ಫಾ. ವಿಜಯ್ ವಿಕ್ಟರ್ ಲೋಬೊ, ಫಾ. ಬೊನವೆಂಚರ್ ನಜರೆತ್, ಮಾಧ್ಯಮ ಸಂಚಾಲಕ ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು