6:52 AM Wednesday2 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌

ಇತ್ತೀಚಿನ ಸುದ್ದಿ

Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ ವಿರುದ್ಧ ದೆಹಲಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

27/03/2025, 18:07

ನವದೆಹಲಿ(reporterkarnataka.com): ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಜಿ ಅವರ ನೇತೃತ್ವದಲ್ಲಿ, ದೆಹಲಿಯಲ್ಲಿ ಇಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ ಎಂಬ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ದೆಹಲಿಯ ಬೀದಿಗಳಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದ ಹಾಗೂ ಕನ್ನಡ ಬಾವುಟಗಳು ಹಿಡಿದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ರವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗ ಕೊಡಿ, ನಿಮ್ಮ ವ್ಯರ್ಥ ಭಾಷಣಗಳು ಬೇಡ ಇಲ್ಲವಾದರೆ ಸಂಸತ್ತಿಗೆ ಮುತ್ತಿಗೆ ಹಾಕುತ್ತೇವೆಂದು ಯುವ ಕಾಂಗ್ರೆಸ್ ನ ಕಾರ್ಯಕರ್ತರು ಪ್ರತಿಧ್ವನಿ ಮೊಳಗಿಸಿದರು.


ಕೇಂದ್ರದಲ್ಲಿ ಕುಳಿತಿರುವ ಯುವ ವಿರೋಧಿ ಮೋದಿ ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಈ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲೆಯಿಂದ ಪ್ರತಿಭಟನೆಗೆ ತೆರಳಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜನ್ ಬ್ಯಾರಿಗೇಟ್ ಹತ್ತಿ ಪ್ರತಿಭಟಿಸಿ ಗಮನ ಸೆಳೆದರು.

ಇತ್ತೀಚಿನ ಸುದ್ದಿ

ಜಾಹೀರಾತು