5:56 PM Saturday29 - March 2025
ಬ್ರೇಕಿಂಗ್ ನ್ಯೂಸ್
Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ… BJP Internal War | ಯಡಿಯೂರಪ್ಪ ಕುಟುಂಬದ ಕಟು ಟೀಕೆಕಾರ ಯತ್ನಾಳ್ ಗೆ… Protest | ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಆಗ್ರಹಿಸಿ ಬೃಹತ್… ಮೂಡಿಗೆರೆ ಸುತ್ತಮುತ್ತ ಧಾರಾಕಾರ ಮಳೆ: ಬಾಳೂರಿನ ಕಲ್ಲಕ್ಕಿಯ ಮುಖ್ಯ ರಸ್ತೆಗೆ ಉರುಳಿದ ಮರ ನಮ್ಮ ಭಾರತೀಯ ಸಂಸ್ಕೃತಿ, ಆಯುರ್ವೇದ ದೇಶದ ಆಸ್ತಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಇತ್ತೀಚಿನ ಸುದ್ದಿ

Shame..Shame | ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗದ ಕಟ್ಟಡ ಉದ್ಘಾಟನೆ: ಕಾಂಗ್ರೆಸ್ – ಬಿಜೆಪಿ ಮಧ್ಯೆ ರಾಜಕೀಯ ಮೇಲಾಟ

24/03/2025, 15:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ರಾಜಕೀಯ ಮೇಲಾಟಕ್ಕೆ ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಸಾಕ್ಷಿಯಾದ ಘಟನೆ ಇಂದು ಚಿಕ್ಕಮಗಳೂರಿನಲ್ಲಿ ನಡೆಯಿತು.

ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷವಾದ
ಬಿಜೆಪಿ ಮಧ್ಯೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮ
ಕ್ರೆಡಿಟ್ ವಾರ್ ಆಗಿ ಪರಿವರ್ತನೆಗೊಂಡಿತು. ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್, ಕಾಂಗ್ರೆಸ್ ಶಾಸಕ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಸಿ.ಟಿ. ರವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿ.ಟಿ.ರವಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಹೊತ್ತು ಕುಣಿದರು.
ಸಚಿವ ಜಾರ್ಜ್, ಶಾಸಕ ತಮ್ಮಯ್ಯ ಎದುರೇ ಸಿ.ಟಿ.ರವಿ ಹೊತ್ತು ಡ್ಯಾನ್ಸ್ ಮಾಡಿದರು.
ಕಾರ್ಯಕ್ರಮ ಮುಗಿಯುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಜಿಲ್ಲಾಸ್ಪತ್ರೆ ಹೊರರೋಗಿ ವಿಭಾಗದ ಕಟ್ಟಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಇಂದು ಹೊರರೋಗಿ ವಿಭಾಗವನ್ನು ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು.

ಒಂದೆಡೆ ಸಿ.ಟಿ.ರವಿಗೆ ಜೈ…ಕೇಳಿ ಬಂದರೆ, ಮತ್ತೊಂದೆಡೆ ಜಾರ್ಜ್ ಗೆ ಜೈ, ಮಗದೊಡೆ ತಮ್ಮಯ್ಯನಿಗೆ ಜೈ ಮಾರ್ದನಿಸುತ್ತಿತ್ತು.
ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಟೇಪ್ ಕಟ್ ಮಾಡುವಾಗ ಮೂವರು ನಾಯಕರ ಬೆಂಬಲಿಗರಿಂದ ಘೋಷಣೆ ಮೊಳಗಿತು. ಒಂದು ಗುಂಪಿಗೆ ಸೆಡ್ಡು ಹೊಡೆಯುವಂತೆ ಮತ್ತೊಂದು ಗುಂಪಿನಿಂದ ಘೋಷಣೆ ಮೊಳಗುತ್ತಿತು. ನೆರದಿದ್ದವರಿಗೆ ಯಾರೂ, ಯಾರ ಪರ ಕುಗ್ತಿದ್ದಾರೆಂಬುದೇ ತಿಳಿಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು