ಇತ್ತೀಚಿನ ಸುದ್ದಿ
ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ನಟ ರಮೇಶ್ ಅರವಿಂದ್ ಕುಟುಂಬ ಸಮೇತ ಭೇಟಿ: ವಿಶೇಷ ಪೂಜೆ ಸಲ್ಲಿಕೆ
16/03/2025, 15:29

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnata@gmail.com
ಪ್ರಸಿದ್ಧ ಕನ್ನಡ ಚಿತ್ರನಟ ರಮೇಶ್ ಅರವಿಂದ್ ಅವರು ಕುಟುಂಬ ಸಮೇತರಾಗಿ ನಿಡುವಾಳೆ ರಾಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತಾಧಿಕಾರಿ ಸುನೀಲ್ ಜೆ. ಗೌಡ್ರು ಅವರು ರಮೇಶ್ ಅರವಿಂದ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ದೇವಾಲಯದ ವ್ಯವಸ್ಥಾಪಕರಾದ ಎನ್. ಆರ್. ನಾಗರಾಜ್ ಭಟ್, ಅರ್ಚಕರಾದ ನಾಗೇಂದ್ರ ಕಾರಂತ್, ಸಿಬ್ಬಂದಿ ಸೂರ್ಯನಾರಾಯಣ ಹಾಗೂ ಸ್ಥಳೀಯ ಗ್ರಾಮಸ್ಥರು ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದರು.
ಪೂಜಾ ಕಾರ್ಯಕ್ರಮವು ಶ್ರದ್ಧಾ ಮತ್ತು ಭಕ್ತಿಯ ವಾತಾವರಣದಲ್ಲಿ ನಡೆಯಿತು. ದೇವಾಲಯಕ್ಕೆ ಆಗಮಿಸಿದ ರಮೇಶ್ ಅರವಿಂದ್ ಅವರ ಅಭಿಮಾನಿಗಳು ಹಾಗೂ ಭಕ್ತರು ಅವರೊಂದಿಗೆ ಕ್ಷಣಕಾಲ ಸಂವಾದ ನಡೆಸಿ ಸಂತೋಷ ವ್ಯಕ್ತಪಡಿಸಿದರು.