ಇತ್ತೀಚಿನ ಸುದ್ದಿ
ಅಭಿವೃದ್ಧಿ ಅಂದ್ರೆ ಕೇವಲ ರಸ್ತೆ, ಸೇತುವೆ ನಿರ್ಮಿಸುವುದಲ್ಲ, ಜನರು ಸಾಮರಸ್ಯ, ಸೌಹಾರ್ದ ಬದುಕು ಕೂಡ ಅಭಿವೃದ್ಧಿಯೇ: ಬಿಜೆಪಿ ಶಾಸಕರಿಗೆ ಸ್ಪೀಕರ್ ಖಾದರ್ ಕಿವಿಮಾತು
14/03/2025, 22:57

ಬೆಂಗಳೂರು(reporterkarnataka.com): ಅಭಿವೃದ್ಧಿ ಅಂದ್ರೆ ಕೇವಲ ರಸ್ತೆ, ಸೇತುವೆ ನಿರ್ಮಿಸುವುದಲ್ಲ, ಜನರು ಸಾಮರಸ್ಯ, ಸೌಹಾರ್ದ ತೆಯಿಂದ ಬದುಕುವ ಹಕ್ಕು ಕಲ್ಪಿಸುವುದು ಕೂಡ ಅಭಿವೃದ್ದಿಯೇ.
ಪ್ರತಿ ಊರಿನಲ್ಲಿ ಹಿಂದೂ- ಮುಸ್ಲಿಂ – ಕ್ರೈಸ್ತರ ಮಕ್ಕಳು ಕೈಕೈ ಹಿಡಿದು ಸಾಮರಸ್ಯದಿಂದ ಆಟವಾಡುವ ಪರಿಸ್ಥಿತಿಯನ್ನು ನಾವು ನಿರ್ಮಿಸಬೇಕು. ಆಗ ನಿಜವಾಗಿಯೂ ಅಭಿವೃದ್ಧಿಗೆ ಅರ್ಥ ಬರುತ್ತದೆ.
ಹೀಗೆಂತ ಹೇಳಿದವರು ಬೇರೆ ಯಾರೂ ಅಲ್ಲ, ರಾಜ್ಯದಲ್ಲಿ ಸಾಂವಿಧಾನಿಕವಾಗಿ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿರುವ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಅವರು. ವಿಧಾನಸಭೆಯಲ್ಲಿ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿರುವಾಗ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರನ್ನು ಉದ್ದೇಶಿಸಿ ಸ್ಪೀಕರ್ ಖಾದರ್ ಅವರು ಈ ಮಾತನ್ನು ಹೇಳಿದರು. ನಮಗೆ ಸಾಮರಸ್ಯ, ಸೌಹಾರ್ದತೆಯ ಅಗತ್ಯವಿದೆ. ದ್ವೇಷ ಭಾಷಣ ಮಾಡುವವರನ್ನು ನಮ್ಮ ಊರಿಗೆ ಬರಲು ಅವಕಾಶ ನೀಡುವುದು ಬೇಡ ಎಂದು ಖಾದರ್ ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಸುನಿಲ್ ಕುಮಾರ್ ಅವರು, ನೀವು ಕರಾವಳಿಯನ್ನುದ್ದೇಶಿಸಿ ಈ ಮಾತನ್ನು ಹೇಳುತ್ತಿದ್ದೀರಾ? ಅಥವಾ ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆಯಾ? ಎಂದು ಪ್ರಶ್ನಿಸಿದರು. ಮರು ಉತ್ತರ ನೀಡಿದ ಸ್ಪೀಕರ್ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.
ನಾವು ಸೌಹಾರ್ದತೆಗೆ ಬದ್ದವಾಗಿರುವುದರಿಂದಲೇ ಅಲ್ವೇ ನಿಮ್ಮನ್ನು ಸ್ಪೀಕರ್ ಆಗಿ ಒಪ್ಪಿಕೊಂಡಿರುವುದು ಎಂದರು.