ಇತ್ತೀಚಿನ ಸುದ್ದಿ
ರಂಜಾನ್ ಮಾಸ: ಸಮೋಸಕ್ಕೆ ಭಾರೀ ಡಿಮಾಂಡ್; ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಮಾರಾಟ
11/03/2025, 20:46

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ರಂಜಾನ್ ಮಾಸವು ಮುಸ್ಲಿಂ ಸಮುದಾಯದ ಪವಿತ್ರ ಉಪವಾಸ ಮತ್ತು ಪ್ರಾರ್ಥನೆಯ ಸಮಯ. ಈ ಅವಧಿಯಲ್ಲಿ ಊಟದ ತಯಾರಿ ಮತ್ತು ಆಹಾರದ ವ್ಯಾಪಾರವು ಹೆಚ್ಚಾಗುತ್ತದೆ.
ಶ್ರೀನಿವಾಸಪುರ ಪಟ್ಟಣದಲ್ಲಿಯೂ ಈ ಸಂಭ್ರಮ ಸ್ಪಷ್ಟವಾಗಿ ಕಾಣಸಿಗುತ್ತಿದ್ದು, ವಿಶೇಷವಾಗಿ ಆಜಾದ್ ರಸ್ತೆ, ಜಾಮಿಯಾ ಮಸೀದಿ, ಸೂಫಿಯ ಮಸೀದಿ ಹಾಗೂ ನೂರಾಣಿ ಮಸೀದಿ ಸುತ್ತಮುತ್ತಲಿನ ಪ್ರದೇಶಗಳು ಸಮೋಸ ಖರೀದಿ ಕೇಂದ್ರಗಳಾಗಿವೆ.
ಶ್ರೀನಿವಾಸಪುರದಲ್ಲಿ ರಂಜಾನ್ ತಿಂಗಳ ವಿಶೇಷ ಆಹಾರಗಳ ಬೇಡಿಕೆ ಹೆಚ್ಚಿದ್ದು, ಸಮೋಸ ವ್ಯಾಪಾರಕ್ಕೆ ಭಾರೀ ಗರಿಗೆದರಿದೆ. ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಸಮೋಸಗಳು ಮಾರಾಟವಾಗುತ್ತಿದ್ದು, ಒಂದು ಸಮೋಸಿನ ಬೆಲೆ ರೂ.15ಕ್ಕೆ ಮಾರಾಟವಾಗುತ್ತಿದೆ. ಈ ಆಹಾರ ಪ್ರಿಯರಿಗೆ ರುಚಿ ನೀಡಲು ಹಲವಾರು ವ್ಯಾಪಾರಿಗಳು ವಿವಿಧ ಸ್ವಾದದ ಸಮೊಸಗಳನ್ನು ತಯಾರಿಸುತ್ತಿದ್ದಾರೆ.
ಇಫ್ತಾರ್ ಸಮಯದಲ್ಲಿ ಜೋರಾಗುವ ಮಾರಾಟ
ಉಪವಾಸ ಮುಗಿಯುವ ಇಫ್ತಾರ್ ಸಮಯದಲ್ಲಿ, ಮಸೀದಿಗಳ ಸುತ್ತಮುತ್ತಲಿನ ಪ್ರದೇಶಗಳು ಜನಸಂದಣಿಯಿಂದ ಕಿಕ್ಕಿರಿದಿರುತ್ತವೆ. ಜನರು ಸಮೋಸ, ಖರ್ಜೂರ,ಕಲ್ಲಂಗಡಿಕಾಯಿ , ಅನಾನಸ್ , ಪಪ್ಪಾಯ , ಬಾಳೆಹಣ್ಣು, ಹಣ್ಣು ಹಂಪಳಗಳು ಹಾಗೂ ತಂಪುಪಾಣಿ ರೂಹು ಅಬ್ಸ ಶರ್ಬತ್ ಮತ್ತು ಹಣ್ಣಿನ ರಾಜ ಮಾವಿನ ಹಣ್ಣು , ಪಕೋಡಾ ಮತ್ತು ಬೇಕರಿ ವಸ್ತುಗಳನ್ನು ಖರೀದಿಸಲು ಆಗಮಿಸುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವನ್ನೂ ನೀಡುತ್ತದೆ.
ಸ್ಥಳೀಯ ಆರ್ಥಿಕತೆಗೆ ಉತ್ತೇಜನೆ ಸಮೋಸ ತಯಾರಿಕೆಯಲ್ಲಿ ಸ್ಥಳೀಯ ಜನರು ತೊಡಗಿಸಿಕೊಂಡಿದ್ದು, ಹೋಟೆಲ್ ಮತ್ತು ಅಂಗಡಿಗಳು ಉತ್ತಮ ಲಾಭ ಗಳಿಸುತ್ತಿವೆ. ಕೆಲವರು ತಾತ್ಕಾಲಿಕವಾಗಿ ಈ ವ್ಯಾಪಾರವನ್ನು ಆರಂಭಿಸಿ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
“ಪ್ರತಿವರ್ಷ ರಂಜಾನ್ ಸಮಯದಲ್ಲಿ ಸಮೋಸ ವ್ಯಾಪಾರ ಬಿರುಸಾಗಿರುತ್ತೆ. ಈ ವರ್ಷ ನಾವು ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟ ಮಾಡುತ್ತಿದ್ದೇವೆ,” ಎನ್ನುತ್ತಾರೆ ಸ್ಥಳೀಯ ವ್ಯಾಪಾರಿಗಳು. “ಸಮೋಸಗಳ ಬೇಡಿಕೆ ಹೆಚ್ಚಾಗಿರುವ ಕಾರಣ ಬೆಳಗ್ಗೆ 9 ರಿಂದಲೇ ತಯಾರಿಕೆ ಪ್ರಾರಂಭಿಸುತ್ತೇವೆ” ಎಂದು ಅವರು ವಿವರಿಸಿದರು.
ಶ್ರೀನಿವಾಸಪುರದ ರಂಜಾನ್ ಮಾಸದ ವಿಶೇಷತೆ
ರಂಜಾನ್ ಸಮಯದಲ್ಲಿ ಶ್ರೀನಿವಾಸಪುರದಲ್ಲಿ ಇಂತಹ ವಿಶೇಷ ಆಹಾರಗಳ ಮಾರಾಟವು ಸ್ಥಳೀಯರ ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಜನರು ಪರಸ್ಪರ ಆತ್ಮೀಯತೆಯಿಂದ ಸಿಹಿ-ಖಾರದ ತಿಂಡಿಗಳನ್ನು ಹಂಚಿಕೊಳ್ಳುವುದು ಸಂಪ್ರದಾಯವಾಗಿದೆ.