2:09 PM Sunday16 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

Student Missing | ಪರೀಕ್ಷಾ ಭಯದಿಂದ ಊರು ಬಿಟ್ಟ ಪಿಯು ವಿದ್ಯಾರ್ಥಿ : ರಾಜ್ಯ ಸುತ್ತಾಡಿ ಉಡುಪಿಗೆ ಬಂದು ಸಿಕ್ಕಿಬಿದ್ದ ಫರಂಗಿಪೇಟೆ ದಿಗಂತ್ !

09/03/2025, 16:23

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಸಂಶಯಾಸ್ಪದವಾಗಿ ಕಾಣೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ ದಿಗಂತ್ ಉಡುಪಿಯಲ್ಲಿ ಸಾರ್ವಜನಿಕರಿಗೆ ಸಿಕ್ಕಿದ್ದು, ಪೊಲೀಸರು ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪೊಲೀಸರ ನಿದ್ದೆಗೆಡಿಸಿದ್ದ ಈ ಪ್ರಕರಣದಿಂದ ನಿಟ್ಟುಸಿರು ಬಿಡುವಂತಾಗಿದೆ. ಹೆತ್ತವರು ಮಗ ಮರಳಿ ಮನೆಗೆ ಬಂದ ಸಂತಸದಲ್ಲಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಓದುತಿದ್ದ ದಿಗಂತ್ ಪರೀಕ್ಷೆಗೆ ಹಾಜರಾಗುವ ಹಾಲ್ ಟಿಕೆಟ್ ಪಡೆದು ಬಳಿಕ ನಿಗೂಢವಾಗಿ ಕಾಣೆಯಾಗಿರುವುದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಪತ್ತೆ ಕಾರ್ಯಕ್ಕೆ ಯಾವುದೇ ಕುರುಹು ಸಿಗಲಿಲ್ಲ. ಈ ಬಗ್ಗೆ ಸಾರ್ಜನಿಕರು ಆತಂಕಕ್ಕೆ ಒಳಗಾಗಿದ್ದು ಮಾತ್ರವಲ್ಲ ವಿಧಾನ ಸಭೆ ಕಲಾಪದಲ್ಲಿ ಜಿಲ್ಲೆಯ ಶಾಸಕರು ಮಾತ್ರವಲ್ಲದೆ ಸಭಾಧ್ಯಕ್ಷರು ಸಹಿತ ಅನೇಕರು ತನಿಖೆ ಶೀಘ್ರವಾಗಿ ಚುರುಕುಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಲಾಗಿತ್ತು.
*ಪೊಲೀಸರಿಂದ ವಿಚಾರಣೆ:* ಪೊಲೀಸರ ಮುಂದೆ ಸತ್ಯವನ್ನೇ ಹೇಳುತ್ತೇನೆ ಎಂದು‌‌ ಎಲ್ಲವನ್ನೂ ಇದೀಗ ಬಾಯಿ ಬಿಟ್ಟಿದ್ದಾನೆ ದಿಗಂತ್.
ಕಾಣೆಯಾದ ದಿನವೇ ಫೆ.25ರಂದು ಊರು ಬಿಟ್ಟು ಮೈಸೂರು ಸೇರಿದ.ಅಲ್ಲಿಂದ ಬೆಂಗಳೂರು ತೆರಳಿ ಒಂದೆರಡು ದಿನ ತಿರುಗಾಡಿದ್ದಾನೆ.ಬಳಿಕ ರೆಸಾರ್ಟ್ ಒಂದರಲ್ಲಿ ಕೆಲಸಕ್ಕೂ ಸೇರಿದ್ದು ಮೂರು ದಿನ ಬಳಿಕ ಹಣ ಪಡೆದು‌ ಅಲ್ಲಿಂದ ಶಿವಮೊಗ್ಗಕ್ಕೆ ತೆರಳಿ ಮತ್ತೆ ಮೈಸೂರಿಗೆ ವಾಪಾಸ್ ಹೋಗಿದ್ದಾನೆ. ಮೈಸೂರಿನಿಂದ ಮತ್ತೆ ಮುರುಡೇಶ್ವರ ಹೋಗುವ ರೈಲು ಹತ್ತಿ ಉಡುಪಿಯಲ್ಲಿ ಇಳಿದಿದ್ದಾನೆ. ಉಡುಪಿಯಲ್ಲಿ ಅತ್ತಿತ್ತ ನೋಡಿ ಡಿಮಾರ್ಟ್ ಗೆ ಪ್ರವೇಶಿಸಿದ್ದಾನೆ. ಅಲ್ಲಿ ತಿರುಗಾಡುತ್ತಿದ್ದ ಈತನನ್ನು ಕಂಡು ಸಂಶಯಗೊಂಡು ವಿಚಾರಣೆ ನಡೆಸಿ ಕಾಣೆಯಾದ ದಿಗಂತ್ ಈತನೇ ಎಂದು ಖಚಿತಪಡಿಸಿಕೊಂಡು ಮಾಹಿತಿ ನೀಡಿದ್ದಾರೆ. ಅಲ್ಲಿನ ಮೇನೇಜರ್ ಈತನ ತಾಯಿಯ ನಂಬರ್ ಪಡೆದು ದಿಗಂತ್ ನಲ್ಲಿ ಮಾತನಾಡಿಸಿದ್ದಾರೆ. ಬಳಿಕ ಪೊಲೀಸರು ಮನೆಯವರಿಗೆ ಒಪ್ಪಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ಹೊರಗೆಡಹಿದ್ದಾನೆ.
ಯಾಕೆ ಹೀಗೆ ಮಾಡಿದೆ ಮಾರಾಯ? ಎಂದು ಕೇಳಿದರೆ ಮೊನ್ನೆ ನಡೆದ ಪರೀಕ್ಷೆಯಲ್ಲಿ‌ಅಂಕ ಕಡಿಮೆ ಬಂದಿತ್ತು.ಹಾಗಾಗಿ‌ ಫೈನಲ್ ಪರೀಕ್ಷೆ ಬರೆಯುವುದು ಕಷ್ಟವಾದೀತು‌ ಎಂಬ ಭಯ ದಿಂದ ಹೀಗೆ ಮಾಡಿದೆ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು