ಇತ್ತೀಚಿನ ಸುದ್ದಿ
Accident | ಪುತ್ತೂರು: ಭೀಕರ ರಸ್ತೆ ಅಪಘಾತ; ಮಗು ಸಹಿತ ಇಬ್ಬರ ದಾರುಣ ಸಾವು, 3 ಮಂದಿ ಗಂಭೀರ
02/03/2025, 22:20

ಜಯಾನಂದ ಪೆರಾಜೆ ಪುತ್ತೂರು
info.reporterkarnataka@gmail.com
ಪುತ್ತೂರು ನೆಹರು ನಗರದ ಮಂಜಲ್ಪಡು ಎಂಬಲ್ಲಿ
ಆಟೋರಿಕ್ಷಾವೊಂದು ಪಲ್ಟಿಯಾಗಿ ನಡುವೆ ನಡದೆ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ಕಡೆಯಿಂದ ಕಬಕ ಕಡೆಗೆ ಹೋಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತೆನ್ನಲಾಗಿದೆ. ಎದುರಿನಿಂದ ಬಂದ ಬಸ್ ಸರಿಸಿಕೊಂಡು ಹೋಗಿದೆ. ಸಿಸಿ ಕ್ಯಾಮೆರಾ ಫೂಟೇಜ್ ನಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಮೃತಪಟ್ಟವರನ್ನು ಕುಂಬ್ರದ ಜಮೀಲಾ(49) ಹಾಗೂ ಮಗು ತಮ್ಸೀರಾ(4) ಎಂದು ಗುರುತಿಸಲಾಗಿದೆ.
ರಿಕ್ಷಾ ಚಾಲಕನೂ ಗಂಭೀರ ಗೊಂಡಿದ್ದು ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.