ಇತ್ತೀಚಿನ ಸುದ್ದಿ
Haveri | ಶ್ರೀ ವೃಷಭೇಂದ್ರ ಅಪ್ಪನವರ ಸಾನಿದ್ಯದಲ್ಲಿ ಸಂಭ್ರಮದ ಜಾತ್ರ್ಯೋತ್ಸವ: ಕಾಗಿನೆಲೆ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ
02/03/2025, 20:43

ಶಿವು ರಾಠೋಡ ಬ್ಯಾಡಗಿ ಹಾವೇರಿ
info.reporterkarnataka@gmail.com
ಭಾವೈಕ್ಯತೆಯ ಹರಿಕಾರ ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಮೂರನೇ ಪುತ್ರನಾದ ಕಾಗಿನೆಲೆಯ ಶ್ರೀ ಸಂಗಮೇಶ್ವರರ ಜಾತ್ರೆಯ ನಿಮಿತ್ಯ ವೈಭವದ ಪಲ್ಲಕ್ಕಿ ಉತ್ಸವ ಜರುಗಿತು.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನೆಲೆಸಿ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ, ಭವರೋಗ ವೈದ್ಯನೆಂದೆ ಪ್ರಸಿದ್ದನಾಗಿರುವ ಕಾಗಿನೆಲೆಯ ಸಂಗಯ್ಯನ ಜಾತ್ರೆಯ ಅಂಗವಾಗಿ ಶನಿವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕಾಧಿಗಳು ಜರುಗಿದವು.
ಕೊಡೇಕಲ್ ಬಸವ ಪೀಠಾಧಿಪತಿಗಳಾದ ಮಹಲಿನಮಠದ ಶ್ರೀ ವೃಷಬೇಂದ್ರ ಅಪ್ಪನವರು ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ ೭.೩೦ ಘಂಟೆಗೆ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರಕಿತು. ವಾಧ್ಯಮೇಳಗಳೊಂದಿಗೆ ಶುರವಾದ ಸಂಗಯ್ಯದೇವರ ಪಲ್ಲಕ್ಕಿ ಉತ್ಸವ ಸುಮಂಗಲೇಯರು ಹಿಡಿದ ಆರತಿಯೊಂದಿಗೆ ಭಕ್ತರ ಜಯಘೋಷಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು, ದಾರಿಯುದ್ದಕ್ಕೂ ಭಕ್ತರು ಪಲ್ಲಕ್ಕಿ ಸಾಗುವ ದಾರಿಗೆ ನೀರು ಹಾಕಿ, ಕಾಯಿ ಒಡೆದು ಭಕ್ತಿ ಸಮರ್ಪಿಸಿದ್ದು ವಿಶೇಷವಾಗಿ ಕಂಡು ಬಂದಿತು. ಗ್ರಾಮ ಪ್ರದಕ್ಷಿಣೆ ನಂತರ ಪಲ್ಲಕ್ಕಿ ಮೂಲಸ್ಥಾನಕ್ಕೆ ಬಂದು ತಲುಪಿತು.ನಂತರ ನಡೆದ ವಿವಿದ ಪೂಜೆಗಳಲ್ಲಿ ಕೊಡೇಕಲ್ ಮತ್ತು ಕಾಗಿನೆಲೆಯ ಭಕ್ತರು ವಿಶೇಷವಾಗಿ ಪುಷ್ಪಗಳಿಂದ ಅಲಕೃತವಾದ ಸಂಗಯ್ಯದೇವರಗದ್ದುಗೆಗೆ ವಿಶೇಷ ಪೂಜೆಗಳನ್ನು ನೇರವೆರಿಸಿ ಊದೂ ಬೆಳೆಗಿ ಕಾಯಿ ಸಕ್ಕರೆ ಅರ್ಪಿಸಿದರು.
*ಹರಕೆ ತೀರಿಸಿದ ಭಕ್ತರು:* ಭಾನುವಾರ ಬೆಳಿಗ್ಗೆ ಪಲ್ಲಕ್ಕಿ ಉತ್ಸವದ ವೇಳೇಯಲ್ಲಿ ಪಲ್ಲಕ್ಕಿ ಹಿಂಬದಿಯಲ್ಲಿ ಜಾತ್ರೆಗೆ ಆಗಮಿಸಿದ ಭಕ್ತವೃಂದ ತಮ್ಮ ಹರಕೆಗಳನ್ನು, ಇಷ್ಟಾರ್ತಗಳ ಪೂರೈಕೆಗಾಗಿ ಕಾಗಿನೆಲೆ ಸಂಗಯ್ಯನಿಗೆ ಉರಿಯುವ ಬಿಸಿಲಿನಲ್ಲಿ ಧೀರ್ಘದಂಡ ನಮಸ್ಕಾರ, ಉರುಳು ಸೇವೆ ತೆಲೆಮಂಡಿ ನೀಡಿ ಭಕ್ತಿ ಮೇರೆದರು.ಅಂದಾಜು ೫೦೦ ಕ್ಕಿಂತ ಹೆಚ್ಚು ಭಕ್ತರು ಸೇವೆ ಸಲ್ಲಿಸಿದರು. ಭಕ್ತರಿಗೆ ಕಾಗಿನೆಲೆ ಗ್ರಾಮದ ಭಕ್ತರು ತಂಪಾದ ನೀರು, ಮಜ್ಜಿಗೆ, ಎಳೆನೀರುಗಳನ್ನು ಉಚಿತವಾಗಿ ನೀಡುವದರ ಮೂಲಕ ಭಕ್ತಸೇವೆ ಸಲ್ಲಿಸದರು.
ಕಮರಿ ತಪ್ಪಲಿಗೆ ಮುಗಿಬಿದ್ದ ಭಕ್ತರು:ಭವರೋಗ ವೈದ್ಯನೆಂದೆ ಪ್ರಸಿದ್ದನಾಗಿರುವ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಮರಿ ಗಿಡದ ಎಲೆಗಳಿಂದ ಧೂಪ ಹಾಕಿದರೆ ಮಕ್ಕಳಿಗೆ ರೋಗ ರುಜಿನೆಗಳು ಬರವುದಿಲ್ಲ ಎಂಬ ನಂಬಿಕೆ ಇರುವ ಕಾರಣದಿಂದ ಜಾತ್ರೆಗೆ ಆಗಮಿಸಿದ್ದ ಭಕ್ತರು ಕಮರಿ ಗಿಡದ ಎಲೆಗಳನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಪಲ್ಲಕ್ಕಿ ಉತ್ಸವದ ಪೂರ್ವದಿನವಾದ ಶನಿವಾರ ರಾತ್ರಿ ಪೂಜ್ಯ ಶ್ರೀ ವೃಷಭೇಂದ್ರ ಅಪ್ಪನವರ ಸಾನಿಧ್ಯದಲ್ಲಿ ಅಷ್ಟ ವಿದಾರ್ಚನೆಗಳೊಂದಿಗೆ ಪಲ್ಲಕ್ಕಿ ಕಳಸಾರೋಹಣ ಕಾರ್ಯಕ್ರಮ ನೇರವೆರಿತು. ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಿತು.
ಕೊಡೇಕಲ್ ಬಸವ ಪೀಠಾಧಿಪತಿಗಳ ಸಾನಿದ್ಯದಲ್ಲಿ ಜರುಗಿದ ಸಂಗಯ್ಯದೇವರ ಜಾತ್ರಾ ಮಹೋತ್ಸದಲ್ಲಿ ಕಾಗಿನೆಲೆಯ ಶೆಟ್ಟರ ಮನೆತನದವರು ಸೇರಿದಂತೆ ಕೊಡೇಕಲ್, ದ್ಯಾಮನಾಳ, ವಿರೇಶ ನಗರ, ಬರದೇವನಾಳ, ಬೂದಿಹಾಳ, ಪೇಟ ಅಮ್ಮಾಪೂರ,ಮುದ್ದೆಬಿಹಾಳ ಸೇರಿದಂತೆ ಹುಣಸಗಿ ತಾಲೂಕಿನ ವಿವಿಧ ಗ್ರಾಮಗಳ ಅಂದಾಜು ೬ ಸಾವಿರಕ್ಕಿಂತಲು ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು..