ಇತ್ತೀಚಿನ ಸುದ್ದಿ
ಮೂಡಿಗೆರೆ: ಸರಕಾರಿ ಬಸ್ ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿ; ಅದೃಷ್ಟವಶಾತ್ ಎಲ್ಲರೂ ಪಾರು
01/03/2025, 17:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಸರ್ಕಾರಿ ಬಸ್ ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ನಡೆದಿದೆ.
ಪಿಕಪ್ ವಾಹನವು ಬಸ್ಸಿನ ಒಂದು ಬದಿಗೆ ಉಜ್ಜಿಕೊಂಡು ಹೋದ ಪರಿಣಾಮ, ಅದರ ಒಂದು ಭಾಗವು ಫ್ರಂಟ್ ಗಾಜಿಗೆ ಸಿಲುಕಿ ಬಸ್ಸಿನಲ್ಲಿಯೇ ಉಳಿಯಿತು.
ಅದೃಷ್ಟವಶಾತ್, ಪಿಕಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದಲ್ಲಿ ಗಂಭೀರ ಗಾಯಗಳೇನೂ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ನಿದ್ದೆಗಣ್ಣಿನಲ್ಲಿದ್ದ ಪಿಕಪ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ಸಂಭವಿಸಿದೆ.
ಅಪಘಾತದ ಸಮಯದಲ್ಲಿ, ಧರ್ಮಸ್ಥಳದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ಪಿಕಪ್ ವಾಹನವು ಉಜ್ಜಿಕೊಂಡಿತು. ಪಿಕಪ್ ವಾಹನದಲ್ಲಿ ತರಕಾರಿ ಇದ್ದಿದ್ದು, ಡಿಕ್ಕಿಯ ಪರಿಣಾಮ ಅದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತು.
ಈ ಪ್ರಕರಣವು ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಹೆಚ್ಚಿನ ಮಾಹಿತಿ ಲಭ್ಯವಾದಂತೆ ಅಪ್ಡೇಟ್ ನೀಡಲಾಗುವುದು.