7:34 PM Tuesday18 - November 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಪಾಲಿಕೆ ಅಂತಿಮ ಸಾಮಾನ್ಯ ಸಭೆ: ಆರಂಭದಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಕುಸ್ತಿ, ಜನಪರ ಚರ್ಚೆ ಗೌಣ; ಕೊನೆಗೆ ದೋಸ್ತಿ, ಪರಸ್ಪರ ಆಲಿಂಗನ

27/02/2025, 20:26

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ನಿರಂತರ ಪರಸ್ಪರ ಆರೋಪ- ಪ್ರತ್ಯಾರೋಪ, ವಾಗ್ಯುದ್ಧ, ಹೊರನಡೆದ ಮೇಯರ್, ಕೊನೆಗೆ ಸುಖಾಂತ್ಯ. ಒಬ್ಬರ ಹೆಗಲಿಗೆ ಇನ್ನೊಬ್ಬರು ಕೈಹಾಕಿ ಸಂತೋಷ ವಿನಿಮಯ, ಪರಸ್ಪರ ಆಲಿಂಗ, ಗ್ರೂಪ್ ಫೋಟೋಗೆ ಫೋಸ್…
ಇದು ಇಂದು(ಗುರುವಾರ) ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆಯ ಪ್ರಸಕ್ತ ಆಡಳಿತ ಅವಧಿಯ ಅಂತಿಮ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.


ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಕೊರೊನಾ ಸಂದರ್ಭದಿಂದ ಇಂದಿನವರೆಗೆ ಐದು ವರ್ಷಗಳ ಕಾಲ ಬೇರೆ ಬೇರೆ ಸವಾಲುಗಳ ನಡುವೆ ಮನಪಾದ ಆಡಳಿತ ಪಕ್ಷವಾಗಿ ನಾವು ಉತ್ತಮ ಸೇವೆ ನೀಡಿದ್ದೇವೆ ಎಂದಾಗ ಪ್ರತಿ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.
ನಿರಾಶ್ರಿತರಿಗೆ ಶಕ್ತಿನಗರದಲ್ಲಿ ನಿರ್ಮಿಸಲು ಯೋಜಿಸಿದ ವಸತಿ ನಿವೇಶನ ಕಾಮಗಾರಿಯನ್ನು ಸಮರ್ಪಕಗೊಳಿಸಲಾಗಿಲ್ಲ, ಒಳಚರಂಡಿ ಅಥವಾ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ಮಂಗಳೂರಿನ ಶಕ್ತಿ ನಗರದಲ್ಲಿ ನಿರಾಶ್ರಿತರಿಗೆ ವಸತಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು ಆದರೆ ಬಿಜೆಪಿ ಸರಕಾರದ ಆಡಳಿತದಲ್ಲಿ ಅದನ್ನು ಕೈಬಿಡಲಾಯಿತು ಹಾಗೂ ಪೌರಕಾರ್ಮಿಕರಿಗಾಗಿ ನೀಡಲಾಗುತ್ತದೆ ಎಂದರೂ ಅದೂ ಕೂಡ ನಡೆದಿಲ್ಲ. ಈಗ ನಮ್ಮ ಸರಕಾರ ಬಂದಿದೆ ಅದನ್ನು ಮಾಡಿಯೇ ತೀರುತ್ತೇವೆ ಎಂದು ಪ್ರತಿಪಕ್ಷದ ಪ್ರವೀಣ್ ಆಳ್ವ ಗರ್ಜಿಸಿದರು.

ಪಾಲಿಕೆ ಪ್ರತಿಪಕ್ಷದ ನಾಯಕರಾದ ಅನಿಲ್ ಕುಮಾರ್ ಪಂಜಿಮೊಗರು‌, ಪ್ರವೀಣ್ ಚಂದ್ರ ಆಳ್ವ , ಎ.ಸಿ. ವಿನಯರಾಜ್ ಸೇರಿದಂತೆ‌ ಅನೇಕ ಸದಸ್ಯರು ಆಡಳಿತ ಪಕ್ಷದಿಂದ ಜನಾನುಕೂಲ ಕೆಲಸಗಳು ನಡೆದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ಆಡಳಿತ ಪಕ್ಷದ‌ ಸದಸ್ಯರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರಕಾರದಿಂದ ಅನುದಾನಗಳು ಬರುತ್ತಿಲ್ಲ ಹಾಗಾಗಿ ರಾಜ್ಯ ಸರಕಾರಾದೀನ ಕಾಮಗಾರಿಗಳು ಕುಂಠಿತಗೊಂಡಿದೆ ಎಂದು, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು. ಬಿಜೆಪಿ‌ ಕಾರ್ಪೋರೇಟರ್‌ಗಳಾದ ಜಯಾನಂದ ಅಂಚನ್, ಕಿರಣ್ ಕುಮಾರ್ ಕೋಡಿಕಲ್,ರೇವತಿ,‌ ಶ್ವೇತಾ, ಸಂಗೀತ ನಾಯಕ್ ಸೇರಿದಂತೆ ಇನ್ನೂ ಹಲವು ಬಿಜೆಪಿ ಕಾರ್ಪೋರೇಟರ್‌ಗಳು ಧ್ವನಿಗೂಡಿಸಿದರು.
ತಡವಾಗಿ ಆರಂಭಗೊಂಡ ಮನಪಾ ಸಾಮಾನ್ಯ ಸಭೆ ಈ ಚರ್ಚೆಗಳಿಂದಾಗಿ ಅರ್ಧ ಗಂಟೆಯೊಳಗೆ ಮುಂದೂಡಲ್ಪಟ್ಟಿತು. ಮತ್ತೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನದ ಭೋಜನದ ಅವಧಿಯವರೆಗೂ ಯಾವುದೇ ಯೋಜನೆಗಳ ಅಥವಾ ಸಮಸ್ಯೆಗಳ ಸಮರ್ಪಕ ಚರ್ಚೆ ನಡೆಯಲೇ ಇಲ್ಲ. ಜನಪರ ಚರ್ಚೆಗಳು ಗೌಣವಾಗಿತ್ತು.
ಭೋಜನದ ಬಳಿಕ ಆರಂಭಗೊಂಡ ಸಾಮಾನ್ಯ ಸಭೆ ಸಿಡಿಲು ಮಳೆ ಸುರಿದ ಬಳಿಕ ತಂಪಾದ ಇಳೆಯಂತೆ ಮೌನದೊಂದಿಗೆ ಆರಂಭವಾಯಿತು. ಮೇಯರ್ ತಮ್ಮ ಅನುಭವಗಳನ್ನು ಹಂಚಿಕೊಂಡರೆ ಪ್ರತಿಪಕ್ಷ ನಾಯಕರೂ ಆಡಳಿತದ ಕಾರ್ಯವನ್ನು ಭಾಗಶಃ ಶ್ಲಾಘಿಸಿದರು. ಬಳಿಕ ಹಲವು ಯೋಜನೆಗಳಿಗೆ ಅನುಮೋದನೆ ಹಾಗೂ ಸ್ಥಿರೀಕರಣ ಹಾಗೂ ಕೈಬಿಡುವ ನಿರ್ಧಾರವನ್ನು ಕಲಾಪದಲ್ಲಿ ತೆಗೆದುಕೊಳ್ಳಲಾಯಿತು. ಈ ಸಂದರ್ಭವೂ ಕೆಲವು ಸಣ್ಣ ಮಟ್ಟಿನ ಚರ್ಚೆಗಳು ನಡೆದವು.

ಸಭೆ ಮುಕ್ತಾಯಗೊಂಡ ಬಳಿಕ ಎಲ್ಲಾ ಕಾರ್ಪೋರೇಟರ್‌ಗಳು ಗುಂಪಿನಲ್ಲಿ ಫೋಟೊ ತೆಗೆದುಕೊಂಡರು. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದ ಬೇಧವಿಲ್ಲದೆ ಎಲ್ಲರೂ ಒಬ್ಬರಿಗೊಬ್ಬರು ಬೆನ್ನುತಟ್ಟುತ್ತಾ, ಆಲಂಗಿಸುತ್ತಾ ಕೈಕುಲುಕುತ್ತಾ ಫೋಟೊಗಳಿಗೆ ಪೋಸ್ ನೀಡಿದರು.!

ಇತ್ತೀಚಿನ ಸುದ್ದಿ

ಜಾಹೀರಾತು