ಇತ್ತೀಚಿನ ಸುದ್ದಿ
Hombelaku | ಸಹ್ಯಾದ್ರಿ ಮೈದಾನದಲ್ಲಿ ತೆರೆದುಕೊಂಡ ಸಾಂಸ್ಕೃತಿಕ ವೈಭವ: ಸುಗ್ಗಿ ಕುಣಿತ, ವೀರಗಾಸೆ, ಟೈಗರ್ ಡ್ಯಾನ್ಸ್ ಜತೆಗೆ ಕೋಲಾಟದ ಮೇಲಾಟ!
24/02/2025, 01:16

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಗ್ರಾಮ ಸ್ವರಾಜ್ ಪ್ರತಿಷ್ಠಾನ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರಿನ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆದ ‘ಹೊಂಬೆಳಕು’ ಕಾರ್ಯಕ್ರಮದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
ಸಹ್ಯಾದ್ರಿ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ಸಾಂಸ್ಕೃತಿಕ ಲೋಕ ತೆರೆದುಕೊಂಡಿತು.
ಸುಗ್ಗಿ ಕುಣಿತ, ಕೋಲಾಟ, ಪೂಜಾ ಕುಣಿತ, ವೀರಗಾಸೆ, ಹುಲಿ ಕುಣಿತ, ಮಹಿಷ ಮರ್ಧಿನಿ ಮುಂತಾದ ಸಾಂಸ್ಕೃತಿಕ ವೈಭವ ನಡೆಯಿತು. ನಂತರ ಪೌರ ಕಾರ್ಮಿಕರಿಂದ ಆಕರ್ಷಕ ಪಥಸಂಚನ ನಡೆಯಿತು.
ಸಮಾರಂಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜನಪ್ರತಿನಿಧಿಗಳು, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಸರಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.
*ಸನ್ಮಾನ:* ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎನ್.ಎಂ. ರಾಜೇಂದ್ರ ಕುಮಾರ್ ಅವರ ಉತ್ತಮ ಕಾರ್ಯವೈಖರಿಗೆ ಸನ್ಮಾನಿಸಲಾಯಿತು.