10:50 AM Monday18 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಬಳ್ಳಾರಿ: ಅನಧಿಕೃತ ಬಡಾವಣೆಯ ಸೈಟು ಹಾಗೂ ಮನೆಗಳಿಗೆ 10 ದಿನದೊಳಗೆ ಬಿ ಖಾತಾ

19/02/2025, 17:08

ಗಣೇಶ್ ಇನಾಂದಾರ ಬಳ್ಳಾರಿ

info.reporterkarnata@gmail. com

ರಾಜ್ಯ ಸರಕಾರ ಮುನಿಸಿಪಲ್ ಕಾಯ್ದೆ 2025 ಅನ್ನು ಜಾರಿಗೊಳಿಸಿದ್ದು, ಇದರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2024ರ ಸೆಪ್ಟೆಂಬರ್ 10 ರೊಳಗೆ ನಿರ್ಮಾಣಗೊಂಡ ಅನಧಿಕೃತ ಲೇಔಟ್ (ಬಡಾವಣೆ) ಸೈಟು ಹಾಗೂ ಮನೆಗಳಿಗೆ ಬಿ ಖಾತಾ
ತೆರೆದು ನೋಂದಣಿ ಹಾಗೂ ವ್ಯವಹಾರಕ್ಕೆ ಸರಕಾರ
ಕಾಯಿದೆ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸಿದ್ದು,ಇದರ ಸಂಪೂರ್ಣ ಸದುಪಯೋಗವನ್ನು ಮಧ್ಯಮ
ವರ್ಗ ಹಾಗೂ ಬಡಜನರು ಪಡೆದುಕೊಳ್ಳಬೇಕು
ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮೂರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು
ಪೂರ್ಣಗೊಳಿಸಬೇಕಿದ್ದು, ಜನರಿಗೆ ತೊಂದರೆಯಾಗದಂತೆ
ಪಾಲಿಕೆಯಿಂದ ವಾಲೆಂಟಿಯರ್‍ ಗಳನ್ನು ನೇಮಕ ಮಾಡಿ ಜನರಿಂದ ದಾಖಲೆಗಳನ್ನು ಪಡೆದು 7-
ರಿಂದ 10 ದಿನಗಳೊಳಗಾಗಿಯೇ ಬಿ ಖಾತಾವನ್ನು
ಮನೆ ಬಾಗಿಲಿ ತಲುಪಿಸುವ ಕೆಲಸ ಮಾಡುತ್ತೇವೆ. ಮಧ್ಯವರ್ತಿಗಳಿಂದ ಬಿ ಖಾತಾ ಮಾಡಿಸಿಕೊಳ್ಳಲು ಬಂದರೆ ಅಂಥವರ ಕೆಲಸ ಪಾಲಿಕೆಯಲ್ಲಿ ಆಗುವುದಿಲ್ಲ. ನೇರವಾಗಿ ಜನರೇ ದಾಖಲೆಗಳನ್ನು ತಂದು ಪಾಲಿಕೆಯಲ್ಲಿ ನೋಂದಣಿ ಮಾಡಿಸಿಕೊಂಡು ಬಿ ಖಾತಾ ಪಡೆಯಬೇಕು. ಇಲ್ಲ ಪಾಲಿಕೆಯಿಂದ ನೇಮಿಸಿರುವ ವಾಲೆಂಟಿಯರ್ ಗಳ ಕೈಗೆ ದಾಖಲೆ ಕೊಟ್ಟರೆ 10 ದಿನಗಳೊಳಗಾಗಿಯೇ
ಬಿ ಖಾತಾ ವಾರಸುದಾರರ ಮನೆ ಸೇರಲಿದೆ ಎಂದು
ನಗರ ಶಾಸಕರು ಹೇಳಿದರು.
ಬಿ ಖಾತಾ ಮಾಡಿಸಲು ಯಾರಾದರೂ ಹಣ
ಕೇಳಿದರೆ ಕೊಡಬಾರದು. ಸಾರ್ವಜನಿಕರು ನೇರವಾಗಿ
ಪಾಲಿಕೆ ಕಚೇರಿಗೆ ಭೇಟಿ ನೀಡಿ ದಾಖಲೆ ನೋಂದಣಿ
ಮಾಡಿಸಿಕೊಂಡು ಬಿ ಖಾತಾ ಪಡೆಯಬೇಕು. ಇಲ್ಲ
ತಮ್ಮ ತಮ್ಮ ವಾರ್ಡ್ ಗಳಿಗೆ ವಾಲೆಂಟಿಯರ್ ಗಳನ್ನ
ನೇಮಿಸುತ್ತೇವೆ ಅಂತವರ ಕೈಗೆ ದಾಖಲೆ ಕೊಟ್ಟು ಬಿ ಖಾತಾ ಮಾಡಿಸಿಕೊಳ್ಳಿ ಎಂದು ಸಾರ್ವಜನಿಕ ಮನವಿ ಮಾಡಿದ ಶಾಸಕ ಭರತ್ ರೆಡ್ಡಿಯವರು
ಪಾಲಿಕೆ ಕಚೇರಿಯಲ್ಲಿ ಇದಕ್ಕಾಗಿಯೇ ಟೋಲ್ ಫ್ರೀ
ನಂಬರನ್ನು ಇಡಲಾಗುವುದು. ಇನ್ನು ಸಾರ್ವಜನಿಕರು ಬಿ ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ
ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಿನಾಂಕ 10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ
ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ
ಪತ್ರಗಳು, ಪ್ರಸ್ತುತ ಸಾಲಿನವರೆಗೆ ಋಣಭಾರ ಪ್ರಮಾಣ
ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ,
ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಯೊಂದಿಗೆ ಈ ಎಲ್ಲಾ ದಾಖಲೆಗಳನ್ನು ಪಾಲಿಕೆ ಕಚೇರಿಯಲ್ಲಿ ನೇರವಾಗಿ ಬಂದು ನೊಂದಾಯಿಸಿ ಕೇವಲ 7ರಿಂದ 10 ದಿನಗಳೊಳಗಾಗಿ ಬಿ ಖಾತಾ ಪಡೆಯಬಹುದು
ಎಂದು ಶಾಸಕ ಭರತ್ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಖಲೀಲ್
ಸಾಬ್, ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ
ಸಭಾ ನಾಯಕ ಪಿ.ಗಾದೆಪ್ಪ, ಪಾಲಿಕೆ ಸದಸ್ಯರಾದ
ರಾಮಾಂಜನೇಯ,ಮುಖಂಡರಾದ ಬಾಪೂಜಿ ನಗರ ಶಿವರಾಜ್ ಡಿ.ಅಯಾಜ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು