ಇತ್ತೀಚಿನ ಸುದ್ದಿ
Tragady | ದೆಹಲಿ: ಕುಂಭಮೇಳಕ್ಕೆ ಹೊರಟಿದ್ದ ಭಕ್ತಸಮೂಹದ ನಡುವೆ ನೂಕುನುಗ್ಗಲು; ಕಾಲ್ತುಳಿತಕ್ಕೆ ಕನಿಷ್ಠ 18 ಮಂದಿ ಸಾವು
16/02/2025, 09:46

ನವದೆಹಲಿ(reporterkarnataka.com): ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಾಲ್ತುಳಿತ ಸಂಭವಿಸಿದೆ. ಆದರೆ ಈ ದುರಂತ ನಡೆದದ್ದು ದೆಹಲಿಯಲ್ಲಿ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ಹೊರಟ ಭಕ್ತಸಮೂಹದ ನಡುವೆ ರೈಲಿಗಾಗಿ ನಡೆದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ.
ಮೃತಪಟ್ಟವರಲ್ಲಿ 14 ಮಂದಿ ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ದೆಹಲಿಯ ಕೇಂದ್ರ ರೈಲ್ವೆ ನಿಲ್ದಾಣದ 14 ಮತ್ತು 15ನೇ ಫ್ಲಾಟ್ ಫಾರ್ಮ್ ನಲ್ಲಿ ಈ ಘೋರ ದುರಂತ ಸಂಭವಿಸಿದೆ. ಕಿಕ್ಕಿರಿದು ಸೇರಿದ್ದ ಜನರು ರೈಲು ಹತ್ತಲು ನೂಕು ನುಗ್ಗಲು ನಡೆಸಿರುವುದರಿಂದ ಕಾಲ್ತುಳಿತ ಉಂಟಾಗಿದೆ.