7:59 PM Wednesday12 - March 2025
ಬ್ರೇಕಿಂಗ್ ನ್ಯೂಸ್
Central v/s State | ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವು: ಸಿಎಂ… Education | ಗುಣಮಟ್ಟದ, ಕೌಶಲ್ಯಾಧಾರಿತ ಶಿಕ್ಷಣ ನೀಡುವುದು ಸರ್ಕಾರದ ಗುರಿ: ಸಚಿವ ಡಾ.ಎಂ.ಸಿ… ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಗೆ ಬಿಜೆಪಿ ವಿರೋಧ; ಇದು ಸಂವಿಧಾನ ವಿರೋಧಿ: ಪ್ರತಿಪಕ್ಷ… Global warming | ಹೆಚ್ಚುತ್ತಿರುವ ತಾಪಮಾನ: ಮೈಸೂರು ಝೂ ಪ್ರಾಣಿಗಳಿಗೆ ವಾಟರ್ ಜೆಟ್,… ರಂಜಾನ್ ಮಾಸ: ಸಮೋಸಕ್ಕೆ ಭಾರೀ ಡಿಮಾಂಡ್; ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಮಾರಾಟ ರೈತರ ಐಪಿ ಸೆಟ್‌ಗಳಿಗೆ ಹೆಚ್ಚುವರಿ 2 ತಾಸು ವಿದ್ಯುತ್‌ ಪೂರೈಕೆ ಬಗ್ಗೆ ಸರಕಾರ… Higher Education | ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸಲು ಆದ್ಯತೆ::ಉನ್ನತ ಶಿಕ್ಷಣ ಸಚಿವ… APMC BILL | ಎಪಿಎಂಸಿ ನಿಯಂತ್ರಣಕ್ಕೆ ಇ-ಫ್ಲಾಟ್ಫಾರಂಗಳು ತಿದ್ದುಪಡಿ ವಿಧೇಯಕ: ವಿಧಾನಸಭೆ ಅನುಮೋದನೆ Power For Farmers | ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ… Education | ಶಿಕ್ಷಣ ಇಲಾಖೆಯಲ್ಲಿ ಶೇ. 80ರಷ್ಟು ಹುದ್ದೆಗಳ ಭರ್ತಿಗೆ ಕ್ರಮ: ಸಚಿವ…

ಇತ್ತೀಚಿನ ಸುದ್ದಿ

ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪೃಥ್ವಿರಾಜ್ ಎಂ. ಪೂಜಾರಿ ಆಯ್ಕೆ

09/02/2025, 14:12

ಮಂಗಳೂರು(reporterkarnataka.com): ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪೃಥ್ವಿರಾಜ್ ಎಂ. ಪೂಜಾರಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, 539 ಮತಗಳನ್ನು ಗಳಿಸಿ ಪೃಥ್ವಿರಾಜ್ ಎಂ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ.
ಮಂಗಳೂರು ತಾಲೂಕಿನ ಕಂಕನಾಡಿ 49ನೇ ವಾರ್ಡಿನ ನಿವಾಸಿಯಾಗಿರುವ ಪೃಥ್ವಿರಾಜ್ ಅವರು ಈ ಹಿಂದೆ ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಬೂತ್ ಅಧ್ಯಕ್ಷರಾಗಿ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ (ರಿ.) ಕಂಕನಾಡಿ ಘಟಕದ ಮಾಜಿ ಅಧ್ಯಕ್ಷರು. ಸೂರ್ಯಕಾಂತಿ ಬಿಸಿನೆಸ್ ನೆಟ್ವರ್ಕ್ ಇದರ ಜೊತೆ ಕಾರ್ಯದರ್ಶಿಯಾಗಿ, ರೋಟರಿ ಕ್ಲಬ್ ಆಫ್ ಮಂಗಳೂರು ಸೀ ಸೈಡ್ ಇದರ ಸದಸ್ಯರಾಗಿದ್ದಾರೆ. 2024ರ ಆಗಸ್ಟ್ ರಿಂದ 2024 ಸಪ್ಟೆಂಬರ್ ರವರೆಗೆ ಮತದಾನ ನಡೆದಿತ್ತು. ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರು.
ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು