7:46 AM Sunday18 - January 2026
ಬ್ರೇಕಿಂಗ್ ನ್ಯೂಸ್
88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ…

ಇತ್ತೀಚಿನ ಸುದ್ದಿ

ನಮ್ಮ ಆಡಳಿತ ವೈಖರಿ, ಜನ ಸ್ಪಂದನೆ ಕಂಡು ಬಿಜೆಪಿ ಕಂಗಾಲಾಗಿದೆ: ತೀರ್ಥಹಳ್ಳಿ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ

31/01/2025, 16:05

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಹುಲಿ ಬಣ್ಣ ನೋಡಿ ನರಿ ತನ್ನ ಚರ್ಮ ಸುಲಿದುಕೊಳ್ತಂತೆ ಹಾಗೆ ಬಿಜೆಪಿಯವರ ಪ್ರತಿಭಟನೆ ಕಥೆಯಾಗಿದೆ. ನಮ್ಮ ಆಡಳಿತ ವೈಖರಿ ಹಾಗೂ ಜನರ ಸ್ಪಂದನೆ ನೋಡಿ ಇನ್ಮೇಲೆ ಆಡಳಿತ ನಡೆಸುವುದು ನಮಗೆ ಕಷ್ಟ ಆಗಲಿದೆ. ನಮ್ಮ ನಾಯಕರ ಬಳಿ ಮುಖ ಇಟ್ಟುಕೊಂಡು ತಿರುಗಲು ಆಗುವುದಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ನಡೆಸಿದ್ದಾರೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಹೇಳಿದರು.
ಗುರುವಾರ ಪಟ್ಟಣ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. 2021ರಿಂದ ಜನಾದೇಶದ ಪ್ರಕಾರ ಅಧಿಕಾರ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಮೂವರು ಮಹಿಳಾ ಜನಪ್ರತಿನಿಧಿಗಳು ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನು ಚುನಾವಣೆಗೆ 20 ತಿಂಗಳು ಬಾಕಿ ಇದೆ. ಹಾಗಾಗಿ ಈಗಲೇ ಪ್ರತಿಭಟನೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದರೆ ಜನ ನಂಬುತ್ತಾರೆ ಎಂದು ತಿಳಿದಿದ್ದಾರೆ. ಹತ್ತು ವರ್ಷ ನಮ್ಮ ಜೊತೆಗೆ ಇದ್ದರೂ ನಮ್ಮ ಬುದ್ದಿ ಬಂದಿಲ್ಲ ಎಂದಿದ್ದಾರೆ. ಅವರ ಬುದ್ದಿ ಹಿಡಿಸದ ಕಾರಣ ಪಕ್ಷ ಬಿಟ್ಟು ಬಂದಿದ್ದು ಎಂದು ತಿಳಿಸಿದರು.
ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ಬಗ್ಗೆ ಮಾತನಾಡುತ್ತಾರೆ. ಅದು ಇಡೀ ದೇಶದ ಸಮಸ್ಯೆ.ಗ್ರಾಮಪಂಚಾಯಿತಿಯಿಂದ ಹಿಡಿದು ದೆಹಲಿಯವರೆಗೂ ಬೀದಿ ನಾಯಿಗಳ ಸಮಸ್ಯೆ ಇರುವುದೇ, ಇಡೀ ಪಟ್ಟಣದಲ್ಲಿ 2000ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಗಂಡು ನಾಯಿ ಹೆಣ್ಣು ನಾಯಿ ಎರಡಕ್ಕೂ ಸರ್ಜರಿ ಮಾಡಿದ್ದೇವೆ. ನಮ್ಮ ಬಜೆಟ್ ಇತಿ ಮಿತಿ ನೋಡಿಕೊಂಡು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಇರುವ ಎಲ್ಲಾ ನಾಯಿಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಿಸಲು 400ಲಕ್ಷಕ್ಕೂ ಹೆಚ್ಚಿನ ಹಣ ಬೇಕು ಎಂದರು.
ಶಾಸಕರನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ, ಶಾಸಕರನ್ನು ಬಿಟ್ಟು ಒಂದೇ ಒಂದು ಕಾರ್ಯಕ್ರಮ ಮಾಡಿಲ್ಲ. ಪಕ್ಷ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ. ಆದರೆ ಪ್ರತಿಯೊಂದು ಸುಳ್ಳು ಹೇಳಿ ಜನರ ಕಣ್ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ನಮ್ಮ ಜೊತೆಗೆ ಇದ್ದರು ಎನ್ನುತ್ತಾರೆ. ಅವರ ಜೊತೆಗೆ ಹೋಗಿದ್ದಕ್ಕೆ ಎರಡು ಬಾರಿ ಪೂರ್ಣ ಬಹುಮತ ಅವರಿಗೆ ಬಂದಿದ್ದು. 6 ಸ್ಥಾನದಲ್ಲಿ ಇದ್ದ ಇವರು 14 ಸ್ಥಾನ ತಲುಪಿದ್ದು ನಾನು ಹೋದಾಗ, ನಾನು ಪಕ್ಷ ಬಿಟ್ಟು ಹೊರ ಬಂದ ಮೇಲೆ ಅವರು ಬಂದಿದ್ದು ಅದೇ ಸ್ಥಾನಕ್ಕೆ ಎಂದರು.

ವಾಣಿಜ್ಯ ಸಂಕಿರ್ಣ, ಕುವೆಂಪು ರಂಗಮಂದಿರ, ಸುವರ್ಣ ಕರ್ನಾಟಕ ಸಂಭ್ರಮ, ಕಾಂತರ 2 ನಾಟಕ, ಆಳ್ವಾಸ್ ಸಂಸ್ಥೆಯ ಮಕ್ಕಳಿಂದ ಕಾರ್ಯಕ್ರಮ, ಕ್ರಿಕೆಟ್ ಟೂರ್ನಿಮೆಂಟ್, ಆರೋಗ್ಯ ಶಿಬಿರ, ಹೀಗೆ ಹಲವಾರು ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಒಳ್ಳೆ ಕೆಲಸ ಮಾಡುವವರಿಗೆ ತೊಂದರೆ ಕೊಡಬಾರದು.
ನಮ್ಮ ಆಡಳಿತದ ಬಗ್ಗೆ ಜನರಿಗೆ ಅಸಮಾಧಾನ ಇಲ್ಲ. ಹಾಗಾಗಿ ಈ ರೀತಿ ಪ್ರತಿಭಟನೆ ಮಾಡಿ ತಾವು ಇದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು