ಇತ್ತೀಚಿನ ಸುದ್ದಿ
ಶಾಸಕರ ಆಪ್ತನಿಂದ ಶಾಲಾ ಮೈದಾನದಲ್ಲೇ ರಸ್ತೆ ನಿರ್ಮಿಸಲು ಯತ್ನ!: ಜೆಸಿಬಿಗೆ ಅಡ್ಡ ನಿಂತು ಶಾಲಾ ಮಕ್ಕಳ- ಪೋಷಕರ ಪ್ರತಿಭಟನೆ
31/01/2025, 15:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸ್ಥಳೀಯ ಶಾಸಕರ ಆಪ್ತನ ಮನೆಯ ಗೃಹಪ್ರವೇಶಕ್ಕಾಗಿ ಶಾಲಾ ಕ್ರೀಡಾಂಗಣದಲ್ಲಿ ರಸ್ತೆ ನಿರ್ಮಿಸಲು ಮುಂದಾದ ಕ್ರಮವನ್ನು ವಿರೋಧಿಸಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಜೇಸಿಬಿಗೆ ಅಡ್ಡ ನಿಂತು ಪ್ರತಿಭಟಿಸಿದ ಘಟನೆ ಕಡೂರು ತಾಲೂಕಿನ ಚೌಳಹಿರಿಯೂರು ಸಮೀಪದ ಹಡಗಲು ಗ್ರಾಮದಲ್ಲಿ ನಡೆದಿದೆ.
ಪೋಷಕರು ಮತ್ತು ಶಾಲಾ ಮಕ್ಕಳಿಂದ ಜೆಸಿಬಿಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದರು.
ಶಾಲೆ ಒಡೆದು ಹಾಕಿ, ಗ್ರೌಂಡ್ ನಲ್ಲಿ ರಸ್ತೆ ಮಾಡಿ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತ ಪ್ರಮೋದ್ ಎಂಬುವರ ಮನೆ ಗೃಹಪ್ರವೇಶಕ್ಕೆ ಶಾಲಾ ಆವರಣದಲ್ಲಿ ರಸ್ತೆ ನಿರ್ಮಿಸುವ ಪ್ರಯತ್ನ ನಡೆದಿತ್ತು. ವಿಲೇಜ್ ಅಕೌಂಟೆಂಟ್ ಸ್ಥಳದಲ್ಲಿ ನಿಂತು ರಸ್ತೆ ಮಾಡಿಸಲು ಮುಂದಾಗಿದ್ದರು. ಫೆಬ್ರವರಿ 6 ರಂದು ಪ್ರಮೋದ್ ಅವರ ಗೃಹಪ್ರವೇಶ ನಡೆಯಲಿದೆ.
ಸರ್ಕಾರಿ ಶಾಲೆಯ ಕ್ರೀಡಾಂಗಣಕ್ಕೆಂದು 18 ಗುಂಟೆ ಗೋಮಾಳ ಜಾಗ ಮೀಸಲು ಇಡಲಾಗಿದೆ. ಮನೆಗೆ ಬೇರೆ ದಾರಿ ಇದ್ದರೂ ಕೂಡ
ಕ್ರೀಡಾಂಗಣದಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು
ಮುಂದಾಗಿದ್ದರು. ಕಡೂರು ಶಾಸಕ ಆನಂದ್ ಅವರ ಆಪ್ತ ಎಂದು ಅಧಿಕಾರಿಗಳು ಮೌನ ವಹಿಸಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.