5:39 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಮೆನು ಪ್ರಕಾರ ಊಟ- ತಿಂಡಿ ಕೊಡದ ವಾರ್ಡನ್: ಸುರಪುರ ಎಸ್ ಸಿ, ಎಸ್ಟಿ ಹಾಸ್ಟೆಲ್‌ಗೆ ಶಾಸಕರ ದಿಢೀರ್ ಭೇಟಿ

29/01/2025, 19:39

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಸುರಪುರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ- ಪಂಗಡದ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳ ಕುರಿತು ವಾರ್ಡ್‌ನ್‌ ಅವರಿಂದ ಮಾಹಿತಿ ಪಡೆದ ಅವರು, ಉಗ್ರಾಣಕ್ಕೆ ಹೋಗಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಹಾಸ್ಟೆಲ್ ಆವರಣ, ಕೊಠಡಿಗಳು, ಶೌಚಾಲಯ ಹಾಗೂ ಅಡುಗೆ ಕೋಣೆಗಳ ಸ್ವಚ್ಛತೆಯನ್ನು ವೀಕ್ಷಿಸಿದರು.
*ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ:*
ವಾರ್ಡ್‌ನ್‌ ನಮ್ಮನ್ನು ಗದರಿಸುತ್ತಾರೆ. ಬೆದರಿಕೆಯಿಂದ ನಮ್ಮನ್ನು ಇಟ್ಟಿದ್ದಾರೆ. ಹಾಲಿಗೆ ಹೆಚ್ಚು ನೀರು ಬೆರೆಸಿಕೊಡುತ್ತಾರೆ, ನೋಡಿ ಸರ್ ಎಂದು ವಿದ್ಯಾರ್ಥಿಗಳು ಹಾಲಿನ ಲೋಟ ತಂದು ತೋರಿಸಿದ್ದರು. ಹಾಗೆಯೇ ಮಧ್ಯಾಹ್ನದ ಚಪಾತಿಯನ್ನು ರಾತ್ರಿ ಕೊಡುತ್ತಾರೆ. ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ ಎಂದು ಸೇರಿದಂತೆ ಹಲವು ಸಮಸ್ಯೆಗಳನ್ನು ಅಲವತ್ತುಕೊಂಡರು.
*ಹಾಸ್ಟೆಲ್ ವಾರ್ಡನ್ ಗೆ ಶಾಸಕರ ಕ್ಲಾಸ್..:!*
ವಾರ್ಡನ್ (ಮೇಲ್ವಿಚಾರಿ) ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಸಮಯ ಪರಿಪಾಲನೆ ಮಾಡಲ್ಲ, ಸರಿಯಾದ ಬಾಳೆಹಣ್ಣು ವಿತರಣೆ ಮಾಡುವುದಿಲ್ಲ ಎಂದು ಮಕ್ಕಳಿಂದ ದೂರು ಬಂದ ಹಿನ್ನೆಲೆ ಇಂದು ಮಾನ್ಯ ಶಾಸಕರು ಶಾಲೆಗೆ ದಿಢೀರ್ ಭೇಟಿ ನೀಡಿ ವಾರ್ಡನ್ ರವರಿಗೆ ಎಚ್ಚರಿಕೆ ನೀಡಿದರು. ಮಕ್ಕಳ ಜೊತೆ ಸೌಜನ್ಯ ರೀತಿ ವರ್ತಿಸಬೇಕೆಂದು ಹೇಳಿದರು.
ಪರಿಶಿಷ್ಟ ಬಾಲಕರ ವಿದ್ಯಾರ್ಥಿ ನಿಲಯ ಆವರಣದಲ್ಲೇ ನಿಂತ ಚರಂಡಿ ನೀರು ಶಾಸಕರಿಗೆ ಆಹ್ವಾನ ನೀಡಿತು. ಹಾಸ್ಟೆಲ್ ಸುತ್ತ ಜಾಲಿ, ಕುರುಚಲು ಬೆಳೆದಿದ್ದು, ಇಂಗು ಗುಂಡಿ ಸಹ ನಿರ್ಮಿಸದೆ ಇರುವುದನ್ನು ಕಂಡ ಶಾಸಕರು, ವಾರ್ಡನ್ ನಿರ್ಲಕ್ಷದ ವಿರುದ್ಧ ಕಿಡಿಕಾರಿದರು. ಸ್ವಚ್ಛತೆಯತ್ತ ಗಮನ ಹರಿಸುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಶಾಸಕರು ಬೆಳಗಿನ ತಿಂಡಿಯನ್ನು ಸವಿದರು. ನಂತರ ಶಾಸಕರು ಮಾತನಾಡಿ ‘ಇನ್ನು ಮುಂದೆ ಹೆದರಬೇಡಿ, ನಿಮಗೆ ಮೆನು ಪ್ರಕಾರವೇ ತಿಂಡಿ, ಊಟ ಕೊಡುತ್ತಾರೆ. ಧೈರ್ಯವಾಗಿರಿ, ನಿಮಗೆ ಸಮಸ್ಯೆ ಎದುರಾದರೆ ತಕ್ಷಣ ನನಗೆ ಕರೆ ಮಾಡಿ’ ಎಂದು ಧೈರ್ಯ ತುಂಬಿ ಸಾಂತ್ವನ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು