4:19 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

26/01/2025, 12:14

ಹುಬ್ಬಳ್ಳಿ(reporterkarnataka.com): ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಸ್ವಾತಂತ್ರೋತ್ಸವ ಎಷ್ಟು ಮುಖ್ಯವೋ ಗಣರಾಜ್ಯೋತ್ಸವವೂ ಅಷ್ಟೇ ಮುಖ್ಯ. ನಮ್ಮಷ್ಟಕ್ಕೆ ನಾವೇ ಗಣರಾಜ್ಯವನ್ನು ಒಪ್ಪಿಕೊಂಡಿದ್ದೇವೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ. ಅಷ್ಟೇ ಅಲ್ಲ ನಮ್ಮ ದೇಶದೊಂದಿಗೆ 19 ದೇಶಗಳು ಸ್ವಾತಂತ್ರ್ಯವಾಗಿದ್ದವು. ಅಲ್ಲಿ ಎಲ್ಲಿಯೂ ಪ್ರಜಾಪ್ರಭುತ್ವ ಉಳಿದಿಲ್ಲ. ಆದರೆ, ಭಾರತದಲ್ಲಿ ಮಾತ್ರ ಪಜಾಪಭುತ್ವ ಉಳಿದಿದೆ. ಇದಕ್ಕೆ ಭಾರತೀಯರು ಪ್ರಜಾಪ್ರಭುತ್ತದ ಮೇಲೆ ಇಟ್ಟಿರುವ ನಂಬಿಕೆ ಕಾರಣ ಎಂದು ನುಡಿದರು.
ಈ ಮಧ್ಯೆ ಸಂವಿಧಾನಕ್ಕೆ ಹಲವಾರು ಸವಾಲುಗಳು ಎದುರಾಗಿರುವುದು ನಮ್ಮ ಇತಿಹಾಸದಲ್ಲಿದೆ. ತುರ್ತು ಪರಿಸ್ಥಿತಿಯ ಕರಾಳ ಛಾಯೆ ನಮ್ಮ ದೇಶದ ಮೇಲಿದೆ. ಎಲ್ಲ ನಾಗರಿಕರ ಹಕ್ಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಿ. ಒಂದು ಲಕ್ಷ ವಿರೋಧ ಪಕ್ಷದವರನ್ನು ಜೈಲಿಗೆ ಹಾಕಿ ತಮ್ಮ ಕುರ್ಚಿ ಉಳಿಸಿಕೊಂಡಿರುವುದನ್ನು ಈ ದೇಶದಲ್ಲಿ ಎಲ್ಲರೂ ನೆನಪಿಟ್ಟಿದ್ದಾರೆ. ಅದು ನಮಗೊಂದು ಪಾಠ, ಮುಂದೆಂದೂಕೂಡ ಸಂವಿಧಾನ ಮೊಟಕುಗೊಳಿಸುವ ಸಾಹಸಕ್ಕೆ ಯಾರೂ ಕೈ ಹಾಕಬಾರದು ಎನ್ನುವುದನ್ನು ನಮಗೆ 1977 ರ ಚುನಾವಣೆ ಕಲಿಸಿದೆ. ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತ್ತು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳ ಮೂಲಕ ಸಂವಿಧಾನ ರಕ್ಷಣೆ ಮಾಡಿದೆ. ಕೇಶವಾನಂದ “ಭಾರ್ತಿ ಪಕರಣ, ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ ಅವರ ಪ್ರಕರಣ, ಶಾಭಾನು ಪ್ರಕರಣ ಇವೆಲ್ಲವೂ ಪಜಾಪಭುತ್ವ ಉಳಿದರೆ ನಮ್ಮ ಹಕ್ಕುಗಳು ಉಳಿಯುತ್ತವೆ. ಆಗ ದೇಶ ಉಳಿಯುತ್ತದೆ ಎನ್ನುವುದನ್ನು ಎತ್ತಿ ತೋರಿಸಿವೆ. ಅಲ್ಲದೇ ನಮ್ಮ ಹಕ್ಕುಗಳ ಜೊತೆಗೆ ಪ್ರತಿಯೊಬ್ಬರ ನಾಗರಿಕರ ಕರ್ತವ್ಯವೂ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ರಕ್ಷಣೆಗೆ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವ ಮಾತಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ರಕ್ಷಣೆಗೆ 1975 ರಲ್ಲಿ ಕಾಂಗ್ರೆಸ್‌ನವರು ಸಂವಿಧಾನ ಮೊಟಕುಗೊಳಿಸಿದಾಗ ಜಯ ಪ್ರಕಾಶ ನಾರಾಯಣ ಅವರು ಸಂಪೂರ್ಣ ಕ್ರಾಂತಿ ಘೋಷಣೆ ಮಾಡಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದಿದೆ. ಆ ಮೂಲಕ ಸಂವಿಧಾನ ಹಾಗೂ ಪ್ರಜಾರ್ಪಭುತ್ತ ರಕ್ಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಣ ಮರೆವು ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
*ಪೊಲೀಸರ ಮೇಲೆ ಕ್ರಮ ಅಗತ್ಯ:*
ಮೈಕ್ರೊ ಫೈನಾನ್ಸ್ ನಿಯಂತ್ರಣಕ್ಕೆ ಆರ್‌ಬಿಐ ನಿಯಮಗಳಿವೆ. ಸುಗ್ರೀವಾಜ್ಞೆ ಬಹಳಷ್ಟಿವೆ. ಆದರೆ, ಅವುಗಳನ್ನು ಜಾರಿಗೆ ತರುವ ಕೆಲಸ ಆಗಬೇಕು. ಪೊಲಿಸರು ಕಳ್ಳರ ಜೊತೆ ಸೇರಿದರೆ ಹೇಗೆ ನಿಯಂತ್ರಣ ಆಗುತ್ತದೆ. ಮೈಕ್ರೊ ಫೈನಾನ್ಸನ್ನು ಪೊಲೀಸರು ಬೆಂಬಲಿಸುತ್ತಿದ್ದಾರೆ. ಏಕೆಂದರೆ ಟಾನ್ಸಫರ್‌ನಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ದುಡ್ಡು ಕೊಟ್ಟು ಬಂದ ಅಧಿಕಾರಿ ತನ್ನ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಮೈಕ್ರೋ ಫೈನಾನ್ಸ್ ಕೂಡ ಒಂದು. ಬಡವರು ಪೊಲಿಸರಿಗೆ ಏನೂ ಕೊಡುವುದಿಲ್ಲ. ಮೈಕೋ ಫೈನಾನ್ಸ್ ಮಾಲಿಕರೇ ಹಣ ಕೊಡುವುದು. ಅದನ್ನು ಮೊದಲು ನಿಯಂತ್ರಣ ಮಾಡಲಿ, ತಮ್ಮ ಹುಳುಕನ್ನು ಮುಚ್ಚಿಟ್ಟುಕೊಂಡು ಮೈಕ್ರೊ ಫೈನಾನ್ಸಿಗೆ ಬೆಂಬಲಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕೇವಲ ಸಭೆ ಮಾಡಿ, ಸುಗ್ರೀವಾಜ್ಞೆ ಮಾಡುವುದರಿಂದ ಏನೂ ಆಗುವುದಿಲ್ಲ. ಏನಾದರೂ ಸಮಸ್ಯೆ ಬಂದರೆ ಸಭೆ ಮಾಡುವ ಚಾಳಿ ಮುಖ್ಯಮಂತ್ರಿಗೆ ಇದೆ. ಅದರಿಂದ ಏನೂ ಪರಿಹಾರ ಆಗುವುದಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಅನುಷ್ಠಾನಕ್ಕೆ ಇಳಿಯಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು