9:00 PM Tuesday24 - March 2026
ಬ್ರೇಕಿಂಗ್ ನ್ಯೂಸ್
ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್… ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ: ಹೆಚ್ಚುತ್ತಿರುವ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ

ಇತ್ತೀಚಿನ ಸುದ್ದಿ

ಉತ್ಸವಕ್ಕೆ ಮುಖ ತೋರಿಸದ ಮುಖ್ಯಮಂತ್ರಿ: ಬಹುಸಂಸ್ಕೃತಿಯ ಮರೆತರೇ ಸಿಎಂ ಸಿದ್ದರಾಮಯ್ಯರು?

18/01/2025, 11:12

ಮಂಗಳೂರು(reporterkarnataka.com): ಇದು ಬಹು ಸಂಸ್ಕೃತಿ ಉತ್ಸವದ ಕರುಣಾಜನಕ ಕತೆ. ಮುಖ್ಯಮಂತ್ರಿಗಳಿಗಾಗಿ ಮೂರು ಬಾರಿ ಮುಂದೂಡಲ್ಪಟ್ಟ ಕಾರ್ಯಕ್ರಮ ಸಿಎಂ ಮಂಗಳೂರಿನಲ್ಲೇ ಇದ್ದರೂ ಕೊನೆಗೂ ಅವರ ಗೈರು ಹಾಜರಿಯಲ್ಲಿ ನಡೆಯಿತು.
ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಮತ್ತು
ಯಕ್ಷಗಾನ ಅಕಾಡೆಮಿ ವತಿಯಿಂದ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಬಹು ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಅವರಿಂದ ಉದ್ಘಾಟನೆಗೆ ಸಮಯ ನಿಗದಿ ಮಾಡಲಾಗಿತ್ತು. ಸಿಎಂ ಅವರ ಅಧಿಕೃತ ಕಾರ್ಯಕ್ರಮದ ಪಟ್ಟಿಯಲ್ಲೂ ಇದು ಸೇರಿತ್ತು. ಬೆಳಗ್ಗೆ 10 ಗಂಟೆಯಿಂದಲೇ ಎಲ್ಲ ಅಕಾಡೆಮಿಯ ಅಧ್ಯಕ್ಷರು ಶೃಂಗರಿಸಿಕೊಂಡು ಬಂದಿದ್ದರು. ಪುರಭವನದ ಹೊರಗಡೆ ಬೆಳಗ್ಗೆ 10 ಗಂಟೆಯಿಂದ ಬ್ಯಾಂಡ್ ಸೆಟ್ ನವರು ನಾದ ಹೊರಡಿಸುತ್ತಿದ್ದರು. ಎಲ್ಲ ಅಕಾಡೆಮಿಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಮದುವೆ ಮನೆಯಲ್ಲಿ ಓಡಾಡುವ ರೀತಿಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಕಳೆದು 2 ಗಂಟೆಯಾದರೂ ಸಿಎಂ ಬರಲೇ ಇಲ್ಲ. ಇನ್ನೇನು ಸಂಜೆ ಬರಬಹುದು ಎಂದು ಅಕಾಡೆಮಿ ಅಧ್ಯಕ್ಷರುಗಳು ಖುಷಿಯಲ್ಲಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ನಿರ್ಗಮಿಸುವ ವರೆಗೂ ಪುರಭವನದತ್ತ ಕಾಲು ಹಾಕಲೇ ಇಲ್ಲ. ವೇದಿಕೆಗಳಲ್ಲಿ ಬಹು ಸಂಸ್ಕೃತಿಯ ಬಗ್ಗೆ ಆಗಾಗ ಮಾತನಾಡುವ ಸಿದ್ದರಾಮಯ್ಯ ಅವರು ಬಹು ಸಂಸ್ಕೃತಿ ಉತ್ಸವದ ಉದ್ಘಾಟನೆ ಬಿಡಿ, ಕನಿಷ್ಠ ಪಕ್ಷ ಮುಖ ಕೂಡ ತೋರಿಸದಿರುವುದಕ್ಕೆ ಕಾರಣ ನಿಜಕ್ಕೂ ನಿಗೂಢವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು