ಇತ್ತೀಚಿನ ಸುದ್ದಿ
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ ಮನೆಗೆ ನುಗ್ಗಿ ದಾಳಿ; ಆಸ್ಪತ್ರೆಗೆ ದಾಖಲು
16/01/2025, 13:31
ಮುಂಬೈ(reporterkarnataka.com): ಬಾಲಿವುಡ್ ನಟ ಸೈಫ್ ಅಲಿಖಾನ್ ಮನೆಗೆ ನುಗ್ಗಿದ ದುಷ್ಕರ್ಮಿಗಳು 6 ಬಾರಿ ಚಾಕುವಿನಿಂದ ಇರಿದಿದ್ದು, ನಟನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮುಂಜಾನೆ 2.30ರ ಸುಮಾರಿಗೆ ದಾಳಿ ನಡೆಸಿದ ತಂಡ ಸೈಫ್ ಅಲಿಖಾನ್ ಅವರಿಗೆ 6 ಚಾಕುವಿನಿಂದ ಇರಿದಿದೆ. ನಟನ ಮನೆಯೊಳಗೆ
ಒಳನುಗ್ಗಲು ಯತ್ನಿಸಿದ ನಂತರ ನಟ ಮತ್ತು ಒಳನುಗ್ಗಿದವರ ನಡುವೆ ಮಾರಾಮಾರಿ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ನಂತರ, ಒಳನುಗ್ಗಿದ ವ್ಯಕ್ತಿ ಸೈಫ್ ಅಲಿಖಾನ್‌ಗೆ 6 ಬಾರಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಸ್ತುತ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಆಲಿಖಾನ್
ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬೆನ್ನುಮೂಳೆಯ ಬಳಿ ಇರಿಯಲಾಗಿದೆ. ಸೈಫ್ ಅಲಿ ಖಾನ್ ಮನೆಯಲ್ಲಿ ಕೆಲಸ ಮಾಡುವ ಮೂವರು ಸಹಾಯಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಟ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಖಚಿತಪಡಿಸಿದ್ದಾರೆ.
ಸೈಫ್ ಅವರು ನರಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಇನ್ನೂ ನಡೆಯುತ್ತಿದೆ. ನಟನ ಸ್ಥಿತಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು
ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನಿರಜ್ ಉತ್ತಮನಿ ತಿಳಿಸಿದ್ದಾರೆ.