8:29 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ ಉತ್ತರಿಸಿ…

15/01/2025, 20:07

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಜಲರಾಶಿಯಿಂದ ಕೂಡಿದ ಸಮುದ್ರದ ದಂಡೆಯಲ್ಲೇ ಇರುವ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. 24× 7 ನೀರು ಕೊಡುತ್ತೇವೆ ಎಂದು ದಶಕಗಳಿಂದ ಆಡಳಿತರೂಢರು ಬೊಬ್ಬೆ ಹಾಕುತ್ತಿದ್ದರೂ ನೆಟ್ಟಗೆ 4 ತಾಸು ನೀರು ಕೊಡಲು ಸಾಧ್ಯವಾಗಿಲ್ಲ. ಇದೀಗ ಬ್ರಹ್ಮ ಬೈದರ್ಕುಳ ಗರೋಡಿ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿಯೂ ಗರೋಡಿಯ ಮುಂಭಾಗದಲ್ಲಿರುವ ಮನೆಗೆಗಳಿಗೆ ನೀರಿಲ್ಲ.


ಕಳೆದ ಸುಮಾರು 5 ದಿನಗಳಿಂದ ಗರೋಡಿ ಎದುರುಗಡೆ ಇರುವ ಪ್ರದೇಶದಲ್ಲಿರುವ ಮನೆಗಳಿಗೆ ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ಆಗುತ್ತಿಲ್ಲ. ಸ್ಥಳೀಯ ಕಾರ್ಪೋರೇಟರ್, ಇಂಜಿನಿಯರ್, ಕೊನೆಗೆ ಮೇಯರ್ ಅವರಿಗೆ ಹೇಳಿದರೂ ಪಾಲಿಕೆ ಆಡಳಿತ ನೀರು ಸರಬರಾಜು ಮಾಡುವಲ್ಲಿ ವಿಫಲವಾಗಿದೆ. ಇಂಜಿನಿಯರ್ ಅವರಲ್ಲಿ ಕೇಳಿದರೆ ನೀರನ್ನು ಸಿಟಿಗೆ ಡೈವರ್ಟ್ ಮಾಡಲಾಗಿದೆ. ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸುತ್ತಾರೆ. ಸಿಟಿಗೆ ಡೈವರ್ಟ್ ಮಾಡಿದ್ದೇವೆ ಅಂದ್ರೆ ಗರೋಡಿ ಇರುವ ಪ್ರದೇಶ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೇ? ಇಲ್ಲಿನ ಕಾರ್ಪೋರೇಟರ್ ಇಲ್ಲವೇ? ಮೇಯರ್ ಅಧಿಕಾರ ವ್ಯಾಪ್ತಿ ಇಲ್ಲಿಗೆ ಬರುವುದಿಲ್ಲವೇ? ಎಂಬ ನೂರಾರು ಪ್ರಶ್ನೆಗಳು ಉದ್ಭವಿಸುತ್ತದೆ. ಅಷ್ಟೇ ಅಲ್ಲದೆ, ಗರೋಡಿ ಪ್ರದೇಶದ ನೀರನ್ನು ಸಿಟಿಗೆ ಕೊಟ್ಟಿದ್ದೇವೆ ಅಂದ್ರೆ, ಒಬ್ಬನ ಹೊಟ್ಟೆಯ ಅನ್ನವನ್ನು ಕಸಿದು ಇನ್ನೊಬ್ಬನಿಗೆ ಉಣಿಸಿದ ಹಾಗೆ ಆಗುವುದಿಲ್ಲವೇ ಮೇಯರ್ ಅವರೇ? ಪಾಲಿಕೆಯದ್ದು ಇದು ಯಾವ ನೀತಿ?
ಸುಮಾರು 9 ದಿನಗಳ ಕಾಲ ನಡೆಯುವ ಗರೋಡಿ ಜಾತ್ರೆ ಅಂದ್ರೆ ಇಡೀ ಊರಿಗೆ ಸಂಭ್ರಮ. ಇಲ್ಲಿನ ಎಲ್ಲ ಮನೆಗಳಿಗೂ ಈ ಜಾತ್ರೆ ಸಮಯದಲ್ಲಿ ನೆಂಟರಿಷ್ಟರು ಬರುತ್ತಾರೆ. ಹೆಚ್ಚಿನ ಮನೆಗಳಲ್ಲಿ ಚಿಕನ್ ಸಾರು, ಚಿಕನ್ ಸುಕ್ಕ, ಕೋರಿ ರೊಟ್ಟಿ, ಕಬಾಬ್ ಸಮರಾಧನೆ ಆಗುತ್ತದೆ. ಆದರೆ ನೀರೇ ಇಲ್ಲ ಅಂದ್ರೆ ಈ ನಂಟರಿಗೆ ಸ್ಥಳೀಯರು ಆತಿಥ್ಯ ನೀಡುವುದಾದರೂ ಹೇಗೆ ಮೇಯರ್ ಅವರೇ?
ವಿಶೇಷವೆಂದರೆ ತುಂಬೆ ವೆಂಟೆಡ್ ಡ್ಯಾಮ್ ನಿಂದ ಮಂಗಳೂರು ನಗರದೊಳಗೆ ನೇತ್ರಾವತಿ ನೀರು ಸರಬರಾಜು ಆಗುವುದು ಇದೇ ನಾಗುರಿ ಗರೋಡಿ ಪ್ರದೇಶದ ಮೂಲಕವೇ. ಕಪ್ಪಗಿನ ದಪ್ಪ ಪೈಪ್ ಹೆಬ್ಬಾವಿನ ತರಹ ಇಲ್ಲಿ ಮಣ್ಣಿನೊಳಗೆ ಹಾಯಾಗಿ ಮಲಗಿವೆ.

ಪಾಲಿಕೆಯ ನೀರಿಲ್ಲದೆ ಗರೋಡಿ ಪ್ರದೇಶದ ಜನರು ಬಿಸ್ಲೆರಿ ಮಾದರಿಯ ನೀರು ಇದೀಗ ಉಪಯೋಗಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು