8:34 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ

09/01/2025, 10:41

ಮೋಹನ್ ನಂಜನಗೂಡು

info.reporterkarnataka@gmail.com

ಇಡೀ ದೇಶದಲ್ಲೇ ಇದೇ ಪ್ರಪ್ರಥಮವಾಗಿ ನಂಜನಗೂಡಿನಲ್ಲಿ ಶಿವಶರಣ ಒಕ್ಕಲಿಗರ ಮುದ್ದಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.


ಶರಣರ ಸಂಘಗಳ ಒಕ್ಕೂಟ ಹಾಗೂ ಒಕ್ಕಲಿಗ ಸಮಾಜದ ಮುಖಂಡರ ಸಹಯೋಗದಲ್ಲಿ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ವಚನ ಗೀತೆ ಹಾಡುವ ಮೂಲಕ ಶಿವಶರಣ ಒಕ್ಕಲಿಗರ ಮುದ್ದಣ್ಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ತಮ್ಮ ಭಕ್ತಿ ನಮನ ಸಲ್ಲಿಸಿದರು.
ನಂತರ ಶರಣರ ಸಂಘಗಳ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ್ ಮಾತನಾಡಿ, ವಿಶ್ವದಲ್ಲೇ ಪ್ರಪ್ರಥಮವಾಗಿ
12ನೇ ಶತಮಾನದ ಶಿವಶರಣರಾಗಿದ್ದ ಒಕ್ಕಲಿಗ ಮುದ್ದಣ್ಣ ಅವರ ಜಯಂತಿಯನ್ನು ನಂಜನಗೂಡಿನಲ್ಲಿ ಆಚರಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿ ಶಿವಶರಣ ಮುದ್ದಣ್ಣ ಅವರು ವಿಜಯಪುರ ಜಿಲ್ಲೆಯ ಜೋಳದ ಹಾಳ ಗ್ರಾಮದಲ್ಲಿ ಜನಿಸಿದವರು. ಇವರು ಕೃಷಿ ಕಾಯಕದಿಂದಲೇ ದಾಸೋಹ ಮಾಡುತ್ತಾ ಬಂದಿದ್ದ ಅನುಭವಿ ಶಿವಶರಣರಾಗಿದ್ದರು.
ರೈತರಾಗಿ ಬೇಸಾಯ ಮಾಡಿಕೊಂಡು ಬರುವ ಒಕ್ಕಲುತನ ಒಂದು ಶ್ರೇಷ್ಠ ಉದ್ಯೋಗ ಎಂದು ಜನತೆಗೆ ಸಾರಿದ ಮಹಾ ಶಿವಶರಣರಾಗಿದ್ದರು.
ಅಲ್ಲದೆ ಇವರ ಒಟ್ಟು 12 ವಚನಗಳು ದೊರಕಿದ್ದು ಎಲ್ಲವೂ ಉತ್ತಮ ವಚನಗಳಾಗಿವೆ ಎಂದು ಅವರ ವಚನಗಳನ್ನು ಹೇಳುವ ಮೂಲಕ ಅವರ ಬಗ್ಗೆ ಮೆಚ್ಚುಗೆ ಮಾತುಗಳ ನ್ನಾಡಿ ಮುಂದೆ ಅದ್ದೂರಿಯಾಗಿ ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದರ ಮೂಲಕ ಸರ್ಕಾರದಿಂದಲೂ ಈ ಜಯಂತಿ ಆಚರಣೆ ಮಾಡುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನವೀನ್ ಹಾಡ್ಯ, ಅಶೋಕ್, ನಂಜುಂಡಸ್ವಾಮಿ, ಗೋಪಾಲ್, ಕೆಂಪೇಗೌಡ ,
ಸತೀಶ್, ಉಮೇಶ್, ತಿರುಮಲೇಶ್ ಗೌಡ , ಕುಮಾರಸ್ವಾಮಿ, ಕಿಶೋರ್ ,ವೆಂಕಟೇಶ್, ಗಿರಿರಾಜು ಗುರುಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು