12:24 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ ಗಡುವು

08/01/2025, 22:04

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಬುಧವಾರ ಬಳ್ಳಾರಿಯ ರೈಲ್ವೇ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮ್ಯಾನೇಜರ್ ಬಿಲ ಮೀನಾ ಇವರನ್ನು ಭೇಟಿಯಾಗಿ ಬಳ್ಳಾರಿ ಮಾರ್ಗದಲ್ಲಿ ನಿಲುಗಡೆಯಾಗಿರುವ ರೈಲುಗಳನ್ನು ಪುನರಾರಂಭಿಸುವಂತೆ ಹಾಗೂ ಹೊಸ ವಿವಿಧ ರೈಲುಗಳನ್ನು ಆರಂಭಿಸುವಂತೆ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ನೀಲಗಡೆಯಾಗಿರುವ ಬೆಳಗಾವ್- ಮನುಗುರು ಎಕ್ಸ್ಪ್ರೆಸ್ ರೈಲು,ಶಿವಮೊಗ್ಗ- ಬಳ್ಳಾರಿ- ಚೆನ್ನೈ ಎಕ್ಸ್ಪ್ರೆಸ್ ರೈಲು,ಕದರಿದೇವರಾಯನಪಲ್ಲಿ- ಬಳ್ಳಾರಿ- ತಿರುಪತಿ ರೈಲು
ಇವುಗಳನ್ನು ಕೂಡಲೇ ಪ್ರಾರಂಭಿಸುವಂತೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಬಳ್ಳಾರಿ ರೈಲ್ವೆ ಪ್ರದೇಶಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಆದಾಯ ರೈಲ್ವೆ ಇಲಾಖೆಗೆ ಸಂದಾಯವಾಗುತ್ತಿದ್ದು, ಹೆಚ್ಚಿನ ಆದಾಯ ನೀಡುತ್ತಿರುವ ಬಳ್ಳಾರಿ ಪ್ರದೇಶಕ್ಕೆ ಹೆಚ್ಚಿನ ರೈಲುಗಳ ಸಂಚಾರದ ಅವಶ್ಯಕತೆ ಇದೆ ಎಂದು ನಿಯೋಗದವರು ಒತ್ತಾಯಿಸಿದರು.
ಹೊಸಪೇಟೆ- ಬಳ್ಳಾರಿ ಮಾರ್ಗವಾಗಿ ಬೆಳಿಗ್ಗೆ ಬೆಂಗಳೂರು ತಲುಪಿ ರಾತ್ರಿ ಮರಳಿ ಬರಲು (ಹಿಂದಕ್ಕೆ) ಒಂದೇ ಭಾರತ್ ಇಲ್ಲವೇ ಇಂಟರ್ ಸಿಟಿ ರೈಲನ್ನು ಆರಂಭಿಸಬೇಕು.
ಮುಂಬೈ- ಹೊಸಪೇಟೆ ಎಕ್ಸ್ಪ್ರೆಸ್ ರೈಲಿನ ಸೇವೆಯನ್ನು ಬಳ್ಳಾರಿವರೆಗೆ ವಿಸ್ತರಿಸಬೇಕು, ಹೊಸಪೇಟೆಯಿಂದ ಬಳ್ಳಾರಿಗೆ ಬಂದು ಹೋಗಲು ಸಮಯದ ಅಭಾವವಿದ್ದಲ್ಲಿ ಈ ರೈಲಿನ ಸೇವೆಯನ್ನು ಬೆಂಗಳೂರು ಇಲ್ಲವೇ ಮೈಸೂರು ವರೆಗೆ ವಿಸ್ತರಿಸಬೇಕು, ವಿಜಯಪುರ- ಮಂಗಳೂರು ಎಕ್ಸ್‍ಪ್ರೆಸ್ ರೈಲಿಗೆ ಚಿಕ್ಕಜಾಜೂರಿನಲ್ಲಿ ಲಿಂಕ್ ಸೌಲಭ್ಯ ಕಲ್ಪಿಸಿ ಗದಗದಿಂದ ಹೊಸಪೇಟೆ ಬಳ್ಳಾರಿ ಚಿತ್ರದುರ್ಗ ಮಾರ್ಗವಾಗಿ ಚಿಕ್ಕಜಾಜುರುವರೆಗೆ ಲಿಂಕ್ಮಂಗಳೂರು
ಎಕ್ಸ್ಪ್ರೆಸ್ ರೈಲನ್ನು ಆರಂಭಿಸಬೇಕು, ಈ ನೂತನ ರೈಲುಗಳ ಆರಂಭದಿಂದ ಕೊಪ್ಪಳ, ಹೊಸಪೇಟೆ ,ಬಳ್ಳಾರಿ, ಚಿತ್ರದುರ್ಗದ ಜನತೆ ವಿಜಯಪುರ ಹಾಗೂ ಮಂಗಳೂರುಗೆ ಹೋಗಿ ಬರಲು ಹಾಗೂ ಬೆಂಗಳೂರು ಮತ್ತು ಸಿಕಂದರಾಬಾದ್ ಚೆನ್ನೈಗೆ ಕಡೆ ಹೋಗಿಬರಲು ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದು ಎಂದು ಮನವಿ ಪತ್ರದಲ್ಲಿ ವಿವರಿಸಲಾಯಿತು.
ಎಲ್ಲ ರೈಲುಗಳ ಆರಂಭಕ್ಕಾಗಿ ಒಂದು ತಿಂಗಳ ಗಡುವನ್ನು ರೈಲ್ವೆ ಕ್ರಿಯಾ ಸಮಿತಿ ವಿಧಿಸಿದ್ದು ರೈಲುಗಳ ಸಂಚಾರ ಆರಂಭವಾಗದಿದ್ದಲ್ಲಿ ಈ ಭಾಗದಲ್ಲಿ ಗೂಡ್ಸ್ ರೈಲುಗಳ ನಿಲುಗಡೆ ಚಳುವಳಿಸೇರಿದಂತೆ ಜನಪರ ಹೋರಾಟವನ್ನು ಫೆಬ್ರವರಿ 2ನೇ ವಾರದಲ್ಲಿ ನಡೆಸುವುದಾಗಿ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದರು.
ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿ ಹಾಗೂ ಹಿರಿಯ ವಕೀಲರಾದ ಮಹೇಂದ್ರ ನಾಥ್, ಮತ್ತು ಎಚ್ ಕೆ ಗೌರಿಶಂಕರ,ಪಿ ಬಂಡೇಗೌಡ, ಮಲ್ಲೇಶ್ವರಿ, ಲೋಕನಾಥ್ ಸ್ವಾಮಿ, ಬಿ ಎಂ ಎರಿಸ್ವಾಮಿ, ಸೂರ್ಯಪ್ರಕಾಶ್, ರುದ್ರಮುನಿ ಸ್ವಾಮಿ, ಆದೋನಿ ವೀರೇಶ್, ಹಚ್ಚೋಳ್ಳಿ ರವಿ, ಡಿಆರ್‍ಯುಸಿಸಿ ಸದಸ್ಯ ಕೆಎಂ ಕೊಟ್ರೇಶ್, ಬಳ್ಳಾರಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಮಲ್ಲನಗೌಡ,ಜನತಾ ಬಜಾರ್‍ನ ಮಾಜಿ ಅಧ್ಯಕ್ಷ ಜಿ .ನೀಲಕಂಠಪ್ಪ ವೀರಶೈವ ಮಹಾಸಬಾದ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ್
ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು