8:39 PM Sunday5 - January 2025
ಬ್ರೇಕಿಂಗ್ ನ್ಯೂಸ್
ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ… ಕ್ರೆಡಲ್ ನಿಂದ 40.53 ಕೋಟಿ ಲಾಭಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಸ್ತಾಂತರ ಬೆಂಗಳೂರು: ಬೈಕ್ ಶೋ ರೂಂನಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ 60ಕ್ಕೂ ಹೆಚ್ಚು… ಮುಂದಿನ ವರ್ಷ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆ…

ಇತ್ತೀಚಿನ ಸುದ್ದಿ

ನಂಜನಗೂಡು: ಭೀಮ ಕೋರೆ ಗಾಂವ್ ವಿಜಯೋತ್ಸವದ ಅಂಗವಾಗಿ ಜನಜಾಗೃತಿ ಸಮಾವೇಶದ ಪೋಸ್ಟರ್ ಬಿಡುಗಡೆ

31/12/2024, 17:28

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

2007ನೇ ಭೀಮ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಜನಜಾಗೃತಿ ಸಮಾವೇಶವನ್ನು ಇದೇ ಜನವರಿ 12 ಭಾನುವಾರದಂದು ನಂಜನಗೂಡಿನ ಅಂಬೇಡ್ಕರ್ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ವಿಜಯಕುಮಾರ್ ಹಾಗೂ ಗೌರವಾಧ್ಯಕ್ಷ ಕಾರ್ಯ ಬಸವಣ್ಣ ತಿಳಿಸಿದ್ದಾರೆ.


ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಮಾವೇಶದ ಅಂಗವಾಗಿ ಜನವರಿ ಒಂದರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ರಂಗಾಯಣದ ಮಾಜಿ ನಿರ್ದೇಶಕರಾದ ಜನಾರ್ದನ್ ಅವರು ಪ್ರಚಾರ ಹಾಗೂ ಜನಜಾಗೃತಿಯ ಸ್ತಬ್ಧಚಿತ್ರಕ್ಕೆ ಚಾಲನೆ ನೀಡುವರು. ಬಳಿಕ ಜನವರಿ 12ರಂದು ನಡೆಯುವ ಸಮಾವೇಶದ ಪ್ರಯುಕ್ತ ಅಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಹೊರಡುವ ಮೆರವಣಿಗೆಗೆ ಮೈಸೂರಿನ ಹುರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ.
ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯು ಸಾಗಿ ಅಂಬೇಡ್ಕರ್ ಭವನ ತಲುಪಲಿದೆ. ನಂತರ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಟಿವಿ 5 ನಿರೂಪಕರು ಹಾಗೂ ಪ್ರಧಾನ ಸಂಪಾದಕರಾದ ರಮಾಕಾಂತ್ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಪ್ರಗತಿಪರ ಚಿಂತಕರಾದ ಡಾ. ಎಲ್. ಎನ್‌ ಮುಕುಂದರಾಜ್ ಭಾಗವಹಿಸಲಿದ್ದು ಸಂಘಟನೆಯ ನಿಕಟ ಪೂರ್ವ ಅಧ್ಯಕ್ಷರಾದ ಅಭಿನಾಗಭೂಷಣ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ ಎಂದು ಕೋರೆಗಾವ್ ವಿಜಯೋತ್ಸವ ಹಾಗೂ ಜನ ಜಾಗೃತಿ ಸಮಾವೇಶದ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು
ಇದೇ ಸಂದರ್ಭ ಕೊರೆಗಾಂವ್ ಜನ ಜಾಗೃತಿ ಸಮಾವೇಶದ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಪುಟ್ಟಸ್ವಾಮಿ, ಸುರೇಶ್ ಶಂಕರಪುರ, ಜೈ ಶಂಕರ್, ಯಶ್ವಂತ್ ಕುಮಾರ್, ಪ್ರಶಾಂತ್, ಕುಮಾರ್, ಮರಿಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು