ಇತ್ತೀಚಿನ ಸುದ್ದಿ
ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ್ ಗೌಡ
21/12/2024, 23:49
ಈ ದೇಶ ಒಟ್ಟಾಗಿ ಇರಬೇಕು ಎಂದರೆ ನಾವು ಬಿಜೆಪಿ ಸೋಲಿಸಬೇಕು: ಕಿಮ್ಮನೆ ರತ್ನಾಕರ್
ರಶ್ಮಿ ಶ್ರೀಕಾಂತ್ ನಾಯಕ್ತೀ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ವಿಧಾನ ಪರಿಷತ್ತು ಹಿರಿಯರ ಸಭೆ ಅತ್ಯಂತ ಗಂಭೀರ ವಿಚಾರಗಳನ್ನು ಚರ್ಚೆ ಮಾಡುವ ಸಾಧನ. ಬಸವರಾಜ್ ಹೊರಟ್ಟಿ ಅಂತ ಹಿರಿಯರು ಸಭಾಪತಿಗಳಾದಂತಹ ಸದನ. ಸುಮಾರು ಮುಕ್ಕಾಲು ಶತಮಾನ ಸ್ವತಂತ್ರ ನಂತರ ಕಳೆದಿದ್ದೇವೆ. ಬಿಜೆಪಿಯ ಮಾಜಿ ಸಚಿವರು ಸಿ.ಟಿ.ರವಿ ಅವರು ಮಹಿಳೆಗೆ ಅಪಮಾನ ನೀಡುವ ರೀತಿ ಅಗೌರವ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ
ತೀರ್ಥಹಳ್ಳಿಯ ಕಾಂಗ್ರೆಸ್ ಪರವಾಗಿ ಅವರ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ
ಬಿಜೆಪಿಯ ಸಿಟಿ ರವಿ ರವರು ಅತ್ಯಂತ ಕೆಟ್ಟ ಭಾಷೆಯನ್ನು ಬಳಸಿದ್ದಾರೆ. ಅತ್ಯಂತ ಗೌರವ ಕೊಡುವ ಕೆಳಮನೆ ವಿಧಾನ ಪರಿಷತ್ ನಲ್ಲಿ ಈ ರೀತಿ ಮಾತನಾಡುವುದು ತಪ್ಪು. ಅವರ ಸದಸ್ಯತ್ವ ರದ್ಧಾಗಬೇಕು. ಅಷ್ಟೇ ಅಲ್ಲದೆ ಮುಂದಿನವರಿಗೆ ಅದು ಪಾಠ ಆಗಬೇಕು ಎಂದರು.
ಈ ರೀತಿಯ ಮಾತು ನಮ್ಮ ಎಲ್ಲ ತಾಯಂದಿರಿಗೆ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನವಾಗಿದೆ.
ಬಿಜೆಪಿಗೆ ಸ್ವತಃ ಬಹುಮತ ಇಲ್ಲ. ಅತ್ಯಂತ ಸಮರ್ಥ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೈತಿಕತೆಗೆ ಧಕ್ಕೆ ತರುವಂತೆ ಮಾಡಿದ್ದಾರೆ. ಅಲ್ಲದೆ ಕಿತ್ತೂರ್ ರಾಣಿ ಚೆನ್ನಮ್ಮನಿಗೆ ಅಗೌರವ ತೋರಿದ ರೀತಿ ಮಾತನಾಡಿದ್ದಾರೆ. ಶ್ರೀರಾಮನಿಗೆ ನೀವು ಗೌರವ ಕೊಡುವುದಾದರೆ ಮಹಿಳೆಯರಿಗೂ ಗೌರವ ಕೊಡುವುದನ್ನು ಕಲಿಯಿರಿ ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಇವತ್ತು ಅಂಬೇಡ್ಕರ್ ಸಮಾಜ ನಿರ್ಮಾಣ ಮಾಡದಿದ್ದರೆ ಏನು ಆಗುತ್ತಿತ್ತು? ಯಾರಿಗೂ ರಿಸರ್ವೇಶನ್ ಸಿಗುತ್ತಿರಲಿಲ್ಲ. ಇದು ಅಂಬೇಡ್ಕರ್ ಅವರ ಕೊಡುಗೆ, ನಾನು ಹಿಂದುವಾಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಸ್ವತಂತ್ರ ಪೂರ್ವದಲ್ಲಿ ಅಂಬೇಡ್ಕರ್ ಸಂಘಟನೆ ಬೇರೆ ಇತ್ತು. ಕಾಂಗ್ರೆಸ್ ನವರೇ ಅಂಬೇಡ್ಕರ್ ರನ್ನು ಸೋಲಿಸಿದ್ದು ಎಂದು ಬಿಜೆಪಿಯವರು ಹೇಳುತ್ತಾರೆ ಆದರೆ ಅಂಬೇಡ್ಕರ್ ರವರು ಕಾಂಗ್ರೆಸ್ ನಿಂದ ನಿಂತಿದ್ದರೆ ಗೆಲ್ಲುತ್ತಿದ್ದರು ಎಂದರು.
ಸಿ.ಟಿ ರವಿ, ಶೋಭ ಕರಂದ್ಲಾಜೆ, ಈಶ್ವರಪ್ಪನವರಿಗೆ ಯಾರು ಪಾಠ ಮಾಡಿದ್ದು ಎಂದು ಗೊತ್ತಿಲ್ಲ. ಅವರು ಮಾತನಾಡುವುದು ನೋಡಿದರೆ ಬರಿ ಬೆಂಕಿ ಹಚ್ಚುವ ಹೇಳಿಕೆ ನೀಡುತ್ತಾರೆ. ಅಪರೂಪಕ್ಕೆ
ಜ್ಞಾನೇಂದ್ರ ಸಹ ಅಂತಹ ಹೇಳಿಕೆ ನೀಡುತ್ತಾರೆ.
ಸಿ ಟಿ ರವಿ ಅವರ ಪರಿಷತ್ ಸದಸ್ಯತ್ವವನ್ನು ರದ್ದು ಮಾಡಬೇಕು.ಇಂತವರು ಸಂಸದೀಯ ವ್ಯವಸ್ಥೆಯೊಳಗೆ ಇರಬಾರದು. ಈ ದೇಶ ಒಟ್ಟಾಗಿ ಇರಬೇಕು ಎಂದರೆ ನಾವು ಬಿಜೆಪಿ ಸೋಲಿಸಬೇಕು.ಬಿಜೆಪಿ ಸಿದ್ದಾಂತವನ್ನು ಸೋಲಿಸಬೇಕು ಎಂದರು.