ಇತ್ತೀಚಿನ ಸುದ್ದಿ
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ
19/12/2024, 10:21
ಬೆಳಗಾವಿ ಸುವರ್ಣಸೌಧ (reporterkarnataka.com):ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಡಿ.18ರಂದು ಅಂಗೀಕಾರ ದೊರೆಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಪರವಾಗಿ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ವಿಧೇಯಕದ ಪರ್ಯಾಲೋಚನೆಗೆ ಕೋರಿದರು.
ವಿಧೇಯಕದ ಮೇಲೆ ಸದಸ್ಯರಾದ ಐವನ್ ಡಿ’ಸೋಜಾ, ನಾಗರಾಜ ಯಾದವ್, ಭಾರತಿ ಶೆಟ್ಟಿ, ಎನ್ ರವಿಕುಮಾರ ಹಾಗೂ ಇತರರು ಮಾತನಾಡಿದರು.
ಸಚಿವರಾದ ಸಂತೋಷ ಲಾಡ್ ಅವರು ವಿಧೇಯಕದ ಬಗ್ಗೆ ವಿವರಿಸಿ, ವಿಧೇಯಕಕ್ಕೆ ಅನುಮೋದನೆ ನೀಡಿ, ಅಂಗೀಕರಿಸಬೇಕು ಎಂದು ಕೋರಿದರು.
ಬಳಿಕ ಧ್ವನಿಮತದ ಮೂಲಕ ಸದನವು ವಿಧೇಯಕವನ್ನು ಅಂಗೀಕರಿಸಿತು.