ಇತ್ತೀಚಿನ ಸುದ್ದಿ
ಕಾಫಿನಾಡಿನಲ್ಲಿ ಮುಂದುವರಿದ ಕಾಡಾನೆ ಹಾವಳಿ: ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗದ ನೈಟ್ ರೌಂಡ್ಸ್!
16/12/2024, 18:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಚಿಕ್ಕಮಗಳೂರು ತಾಲೂಕಿನ ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗ ಓಡಾಡಿ ಗ್ರಾಮಸ್ಥರಲ್ಲಿ ಭಯಹುಟ್ಟಿಸಿದೆ.
ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗ ನೈಟ್ ರೌಂಡ್ಸ್ ಹೊಡೆದಿದೆ.
ಕಾಫಿನಾಡ ಹಳ್ಳಿಗರಿಗೆ ಕಾಡಾನೆ ಗೋಳು ಮುಗಿಯದ ಅಧ್ಯಾಯವಾಗಿದೆ. ಒಂಟಿ ಸಲಗದ ಗ್ರಾಮ ಸುತ್ತಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಡಾನೆ ಗ್ರಾಮಕ್ಕೆ ಬಂದದ್ದು ಗೊತ್ತಾಗಿ ಮನೆಯಿಂದ ಹೊರ ಬಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಹಾಸನದಿಂದ ನಿರಂತರವಾಗಿ ಕಾಡಾನೆಗಳು ಆಗಮಿಸುತ್ತಿದೆ. ಕಾಡಾನೆಯನ್ನ ಸ್ಥಳಾಂತರ ಮಾಡುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು
ಆಗ್ರಹಿಸಿದ್ದಾರೆ.