ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: 9 ದಿನಗಳ ದತ್ತಜಯಂತಿ ಉತ್ಸವಕ್ಕೆ ತೆರೆ: ದತ್ತ ಹೋಮ ಸಂಪನ್ನ
15/12/2024, 18:36
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ವಿವಾದಿತ ದತ್ತಪೀಠದಲ್ಲಿ ದತ್ತಪಾದುಕೆ, ದತ್ತ ಹೋಮದೊಂದಿಗೆ ಸಂಪನ್ನಗೊಳ್ಳುವ ಮೂಲಕ ದತ್ತಜಯಂತಿ ಉತ್ಸವಕ್ಕೆ ಇಂದು ತೆರೆ ಬಿದ್ದಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಿದ್ದಾರೆ ಕಳೆದ 9 ದಿನಗಳಿಂದ ದತ್ತಜಯಂತಿ ಅಂಗವಾಗಿ ದತ್ತಮಾಲಾಧಾರಣೆ ಮಾಡಿರುವ ಭಕ್ತರು ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇರುಮುಡಿ ರೂಪದಲ್ಲಿ ಅಕ್ಕಿ,ಬೆಲ್ಲ,ಕಾಯಿಯನ್ನು ಭಕ್ತರು ಅರ್ಪಣೆ ಮಾಡಿದ್ದಾರೆ. ಭಕ್ತರು ದತ್ತಪೀಠದ ಗುಹೆ ಒಳಗೆ ದತ್ತಪಾದುಕೆ ದರ್ಶನ ಪಡೆದಿದ್ದಾರೆ. ಗುಹೆ ಸಮೀಪವೇ ಇಂದು ಹೋಮ ಹವನ ನಡೆಯಿತು. ಗಣ, ದತ್ತ ಹೋಮಯೊಂದಿಗೆ ದತ್ತಜಯಂತಿ ಉತ್ಸವಕ್ಕೆ ತೆರೆ ಬಿದ್ದಿದೆ.
ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ದತ್ತಪೀಠದಲ್ಲಿ ಮಂಜು,ಚಳಿ,ತುಂತುರು ಮಳೆಯಾಗಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಶಾಸಕ ಸುನೀಲ್ ಕುಮಾರ್ ಸೇರಿದಂತೆ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವರ ಭೇಟಿ ನೀಡಿದ್ದಾರೆ.