ಇತ್ತೀಚಿನ ಸುದ್ದಿ
ದತ್ತಜಯಂತಿ: ಚಿಕ್ಕಮಗಳೂರಿನಲ್ಲಿ ಮಾಲಾಧಾರಿ, ಮಾಜಿ ಸಚವ ಸಿ.ಟಿ.ರವಿ ತಂಡದಿಂದ ಭಿಕ್ಷಾಟನೆ
13/12/2024, 12:21
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆಯಲ್ಲಿ ಮಾಲಾಧಾರಿ, ಮಾಜಿ ಸಚವ ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ ಮಾಡಿದರು.
ಸಿ.ಟಿ.ರವಿ ಸೇರಿ ಮಾಲಾಧಾರಿಗಳು ಭಿಕ್ಷಾಟನೆಯಲ್ಲಿ ಭಾಗಿಯಾದರು. ನಾರಾಯಣಪುರದ ರಾಘವೇಂದ್ರ ಮಠದ ರಸ್ತೆಯಲ್ಲಿ ಭಿಕ್ಷಾಟನೆ ನಡೆಯಿತು. ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ ಮಾಡಲಾಯಿತು.
ಪಡಿ ರೂಪದಲ್ಲಿ ಅಕ್ಕಿ, ಬೆಲ್ಲ, ಕಾಯಿಯನ್ನು ಸ್ಥಳೀಯರು ನೀಡಿದರು. ದತ್ತ ಭಜನೆಯೊಂದಿಗೆ ಮನೆಮನೆಗೆ ತೆರಳಿ ಪಡಿ ಸಂಗ್ರಹ ಮಾಡಲಾಯಿತು. ಪಡಿಯನ್ನ ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯರಿಗೆ ಮಾಲಾಧಾರಿಗಳು ಅರ್ಪಿಸಲಿರುವರು.